ರಾಮನಗರ: ಇಲ್ಲಿನ ವಾಸವಿ ವಿದ್ಯಾನಿಕೇತನ ಟ್ರಸ್ಟ್ನ ಮಾಜಿ ಅಧ್ಯಕ್ಷರು, ನವರತ್ನ ಜ್ಯೂಯೆರ್ಸ್ ಮತ್ತು ಸಾಯಿ ಜ್ಯೂಯೆರ್ಸ್ ಮಾಲೀಕರಾಗಿದ್ದ ಪಿ.ವಿ.ರಾಮಕೃಷ್ಣ ಶೆಟ್ಟಿಯವರು ಸಂಜೆ ೪ ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ ೮೦ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಮಂದಿ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಶವಸಂಸ್ಕಾರ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರೆವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಾಸವಿ ವಿದ್ಯಾನಿಕೇತನ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ವಾಸವಿ ಟ್ರಸ್ಟ್ನ ಪದಾಧಿಕಾರಿಗಳು, ಆರ್ಯ ವೈಶ್ಯ ಸಭಾ, ವಾಸವಿ ಯೂತ್ಸ್ ಫೋರಂ ಮತ್ತು ವಾಸವಿ ಮಹಿಳಾ ಸಂಘದ ಸದಸ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.