Thursday, August 11, 2022

Latest Posts

ರಾಮನಗರ| 15 ದಿನದಲ್ಲಿ 133 ಕೆ.ಜಿ ಗಾಂಜಾ ವಶ

ರಾಮನಗರ: ಗಾಂಜಾ ವಿರುದ್ಧ ಸಮರ ಸಾರಿರುವ ಜಿಲ್ಲೆಯ ಪೊಲೀಸರು ದಾಖಲೆ ಪ್ರಮಾಣದ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಕಳೆದ ೧೫ ದಿನಗಳ ಅಂತರದಲ್ಲಿ ೧೧ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವ ಮೂಲಕ ಬರೊಬ್ಬರಿ ೪೩.೯೧ಲಕ್ಷ ರೂ. ಮೌಲ್ಯದ ೧೩೩ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಒಟ್ಟು ೨೨ ಮಂದಿ ವಿರುದ್ದ ಕೇಸ್ ದಾಖಲಿಸಿ ೧೫ ಮಂದಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಜಿಲ್ಲೆ ಮಾತ್ರವಲ್ಲö, ಹೊರ ರಾಜ್ಯಗಳಿಂದಲ್ಲೂ ಗಾಂಜಾ ವಶ ಪಡಿಸಿಕೊಂಡಿರುವ ಪೊಲೀಸರು, ಗಾಂಜಾ ನಿರ್ಮೂಲನೆಗೆ ಮುಂದಾಗಿದ್ದಾರೆ ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಎಸ್.ಗಿರೀಶ್ ಹೇಳಿದರು.

ಕಳೆದ ೫ ವರ್ಷಗಳಲ್ಲಿ ೯೧ ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದರೆ, ೧೫ ದಿನಗಳ ಅಂತರದಲ್ಲಿ ೧೧೩ ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಐದು ವರ್ಷಗಳಲ್ಲಿ ೨೫ ಪ್ರಕರಣಗಳ ಪೈಕಿ ೧೫ ದಿನಗಳಲ್ಲಿಯೇ ೧೧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇತ್ತಿಚೆಗೆ ಮಾಗಡಿಯಲ್ಲಿ ೬೦ ಕೆಜಿ ಗಾಂಜಾವನ್ನು ವಶಕ್ಕೆ ಪಡೆದು, ಅಂತಾರಾಜ್ಯ ಪೂರೈಕೆದಾರರು ಸೇರಿದಂತೆ ಒಟ್ಟು ೬ ಮಂದಿಯನ್ನು ಬಂಸಲಾಗಿದೆ.

ಅದೇ ರೀತಿ ರಾಮನಗರ, ಹಾರೋಹಳ್ಳಿ, ಚನ್ನಪಟ್ಟಣ ಸೇರಿದಂತೆ ವಿವಿದೆಡೆ ಒಟ್ಟು ೧೧ ಪ್ರಕರಣಗಳಡಿಯಲ್ಲಿ ಎಂದು ಮಾಹಿತಿ ನೀಡಿದರು. ಗಾಂಜಾ ನಿರ್ಮೂಲನೆಗಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಕಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂದಾಗಿದ್ದುö, ಈಗಾಗಲೇ ಕಂದಾಯ, ಅರಣ್ಯ, ಆರೋಗ್ಯ ಇಲಾಖೆ ಅಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಗಾಂಜಾ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಂದಿನಿAದಲೇ ಮುಂದಾಗಿದೆ ಅಲ್ಲದೆ, ಗಾಂಜಾ ವ್ಯಸನ ಮುಕ್ತಗೊಳಿಸಲು ಕೌನ್ಸಿಲಿಂಗ್ ನಡೆಸಲು ಸಹ ಆರೋಗ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಾಲಗಿದೆ ಎಂದು ಗಿರೀಶ್ ಮಾಹಿತಿ ನೀಡಿದರು.

ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ರಾಮನಗರಕ್ಕೆ ಗಾಂಜಾ ತಂದು ನಂತರ ಇಲ್ಲಿಂದ ಪ್ರವಾಸಿ ತಾಣಗಳು, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಗಾಂಜಾ ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು. ಕೇವಲ ಮಾರಾಟಗಾರರನ್ನು ಹಿಡಿಯುವುದು ಮಾತ್ರವಲ್ಲದೇ, ಬೆಳೆಯುವವರ ಮತ್ತು ಪೂರೈಕೆದಾರರ ಮೂಲಕ್ಕೆ ಕೈ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಮಾಗಡಿಯಲ್ಲಿ ಪತ್ತೆಯಾದ ಗಾಂಜಾದ ಮೂಲಕ ಆಂಧ್ರ ಪ್ರದೇಶದ ವಿಶಾಖಪಟ್ಟಣವಾಗಿದ್ದು ಅಲ್ಲಿಂದಲೂ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದರು. ಮಾಗಡಿ ಪೊಲೀಸರು, ವೃತ್ತ ನಿರೀಕ್ಷಕ ಮಂಜುನಾಥ್ ಅವರ ಸಹಯೋಗದಲ್ಲಿ ಗಾಂಜಾ ಕೊಳ್ಳುವವರಂತೆ ಫೋನ್ ಕರೆ ಮಾಡಿ, ಆರೋಪಿಗಳನ್ನು ಬಂಸಿದ್ದಾರೆ.

ವೈಜಾಗ್‌ನಿಂದ ಆರೋಪಿಗಳನ್ನು ಬಂಸಿ ಬರೊಬ್ಬರಿ ೬೦ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದುö, ೮ ಮಂದಿಯನ್ನು ಬಂಸಿರುವುದು ವಿಶೇಷ. ಎಎಸ್‌ಪಿ ರಂಗರಾಜನ್, ಡಿವೈಎಸ್‌ಪಿ ಪುರುಷೋತ್ತಮ್, ಓಂ ಪ್ರಕಾಶ್, ಸಿಪಿಐಗಳಾದ ಬಿ.ಎಸ್.ಮಂಜುನಾಥ್, ನರಸಿಂಹಮೂರ್ತಿ ಮುಂತಾದವರು ಗೋಷ್ಠಿಯಲ್ಲಿದ್ದರು. ಜಿಲ್ಲೆಯಲ್ಲಿ ಈಗಾಗಲೇ ಗಾಂಜಾ ವಿರುದ್ಧ ನಮ್ಮ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಫಲವಾಗಿಯೇ ಅತಿ ಕಡಿಮೆ ಅವಯಲ್ಲಿ ಉತ್ತಮವಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಾಗಿದೆ. ಇದರ ಹೊರತಾಗಿಯೂ ಪ್ರಮುಖವಾಗಿ ಗಾಂಜಾ ಮಾರಾಟವಾಗುವ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss