Wednesday, August 10, 2022

Latest Posts

ರಾಮನಗರ: 34 ಕೊರೋನಾ ಪ್ರಕರಣ ದೃಢ

ರಾಮನಗರ: ಜಿಲ್ಲೆಯಲ್ಲಿ ಚನ್ನಪಟ್ಟಣ 11, ಕನಕಪುರ 2, ಮಾಗಡಿ 3 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಒಟ್ಟು 34 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ರ‍್ಚನಾ ಅವರು ತಿಳಿಸಿದ್ದಾರೆ.

ಒಟ್ಟು ಪ್ರಕರಣ: ಇದುವರೆಗೆ ಜಿಲ್ಲೆಯಲ್ಲಿ 900 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 192, ಕನಕಪುರ 182, ಮಾಗಡಿ 222 ಮತ್ತು ರಾಮನಗರ 304 ಪ್ರಕರಣಗಳು ಸೇರಿವೆ.

ಗುಣಮುಖ: ಒಟ್ಟು 31 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 7, ಮಾಗಡಿ 15 ಮತ್ತು ರಾಮನಗರ 9 ಜನರು ಸೇರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 510 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 93, ಕನಕಪುರ 145, ಮಾಗಡಿ 121 ಮತ್ತು ರಾಮನಗರ 151 ಜನರು ಸೇರಿದ್ದಾರೆ.

ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ದಾಖಲಾಗಿರುವ 900 ಪ್ರಕರಣಗಳ ಪೈಕಿ 510 ಜನರು ಗುಣಮುಖರಾಗಿದ್ದಾರೆ, ಇನ್ನೂ 374 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 374 ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 98, ಕನಕಪುರ 35, ಮಾಗಡಿ 92 ಮತ್ತು ರಾಮನಗರ 149 ಪ್ರಕರಣಗಳು ಸೇರಿವೆ.

ಸಾವು:ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದು, ಇದುವರೆಗೆ ಕನಕಪುರ ತಾಲ್ಲೂಕಿನಲ್ಲಿ 2, ಮಾಗಡಿ ತಾಲ್ಲೂಕಿನಲ್ಲಿ 9 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 16 ಮಂದಿ ನಿಧನರಾಗಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ವರದಿ: ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 15444 (ಹೊಸದಾಗಿ 260 ಸೇರಿ). ಒಟ್ಟು 6676 ಜನ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 256 ಜನರು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ 4376ಗೆ ಏರಿಕೆಯಾಗಿದೆ.

ಜ್ವರ ತಪಾಸಣೆ: ಜ್ವರ ತಪಾಸಣಾ ಕೇಂದ್ರದಲ್ಲಿ 21 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 4000 ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ.

ಕ್ವಾರಂಟೈನ್: ಒಟ್ಟು 8 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ 4 ಜನರು ಸೇರಿದ್ದಾರೆ. ಒಟ್ಟಾರೆ ಇನ್ಸ್ಟ್ಯೂಷನಲ್ ಕ್ವಾರೆಂಟೈನ್ ಸಂಖ್ಯೆ 176ಕ್ಕೆ ಏರಿಕೆಯಾಗಿದೆ.

ಮಾದರಿ ಸಂಗ್ರಹ: ಹೊಸದಾಗಿ 260 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 15996 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 14438 ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. 260 ಬಾಕಿ ವರದಿ ಸೇರಿ ಒಟ್ಟು 397 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss