ರಾಮಮಂದಿರ ನಿರ್ಮಾಣದಲ್ಲಿ ಪೇಜಾವರಶ್ರೀಗಳು ಇರಬೇಕು: ರವಿ ಸುಬ್ರಹ್ಮಣ್ಯ

0
220

ಮಣಿಪಾಲ: ರಾಮಮಂದಿರ ನಿರ್ಮಾಣ ಕಾಲದಲ್ಲಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಉಪಸ್ಥಿತಿ ಇರಬೇಕು. ಅವರು ಆದಷ್ಟು ಶೀಘ್ರವಾಗಿ ಗುಣಮುಖರಾಗಲಿ ಎಂದು ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಪೇಜಾವರ ಶ್ರೀಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಬಳಿಕ ಸುದ್ದಿಗಾರರಗೊಂದಿಗೆ ಮಾತನಾಡಿದ ಅವರು, ಶ್ರೀಗಳು ಎಂದಿಗೂ ಹಾಸಿಗೆ ಹಿಡಿದಿರಲಿಲ್ಲ. ಅವರು ಆದಷ್ಟು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಶೋಷಿತ ಸಮುದಾಯದ ಪರವಾಗಿ ಇರುವಂತಹ ಸ್ವಾಮೀಜಿ ಅವರು, ಎಲ್ಲ ಜಾತಿ ಧರ್ಮಗಳಿಗೂ ಬೇಕಾದವರು. ರಾಮಮಂದಿರ ನಿರ್ಮಾಣ ಕಾಲದಲ್ಲಿ ಅವರು ಇರಬೇಕು. ಪೇಜಾವರ ಶ್ರೀ ರಾಮಮಂದಿರ ನೋಡುವಂತಾಗಲಿ ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮಗುವಿನಂತೆ ಓಡಾಡುವುದನ್ನು ಕಂಡ ನನಗೆ ಅವರು ಮಲಗಿರುವುದನ್ನು ಕಂಡು ಮರುಕವಾಯ್ತು. ಸ್ವಾಮೀಜಿ ಮಲಗಿರುವುದನ್ನು ನಾನು ಯಾವತ್ತು ನೋಡಿಲ್ಲ. ಮಗುವಿನಂತಹ ಮುಗ್ಧತೆ, ಅದಮ್ಯ ಚೇತನ್ಯ ಹೊಂದಿರುವ ಸ್ವಾಮೀಜಿ ಬೇಗ ಚೇತರಿಸಿಕೊಂಡು ಮತ್ತಷ್ಟು ಧರ್ಮದ ಕಾರ್ಯಗಳಲ್ಲಿ ಪಾಲ್ಗೋಳ್ಳುವಂತಾಗಲಿ ಎಂದರು.

ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಪೇಜಾವರಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿ ಇದೆ. ಎಂಆರ್ಐ ರಿಪೋರ್ಟ್ ಗಾಗಿ ಎಲ್ಲರು ಕಾಯುತ್ತಿದ್ದಾರೆ. ಶ್ರೀಗಳ ಪ್ರಜ್ಞಾವಸ್ಥೆಯಲ್ಲಿ ಚೇತರಿಕೆ ಕಾಣಬೇಕಿದೆ. ದೇಶದೆಲ್ಲೆಡೆ ಶ್ರೀಗಳ ಆರೋಗ್ಯಕ್ಕಾಗಿ ಪೂಜೆಗಳು ನಡೆಯುತ್ತಿವೆ. ಹಾಗೆಯೇ ನಮ್ಮ ಮಠದಲ್ಲಿ ಕೂಡ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here