ಬಾಗಲಕೋಟೆ: ಅಯೋದ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕನಸು ನನಸಾದ ಪ್ರಯುಕ್ತ ಬಾಗಲಕೋಟೆಯಲ್ಲಿ ಮಾರುತೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿತು.
ಮಾಜಿ ಶಾಸಕ ಪಿ.ಎಚ್.ಪೂಜಾರ ಅವರು ಭೂಮಿ ಪೂಜೆ ನೆರವೇರಿಸಿದರು.
ಬಾಗಲಕೋಟೆ ನಗರದ ಮುಚಖಂಡಿ ಕ್ರಾಸ್ ದಲ್ಲಿ ಹಳೆಯ ಮಾರುತೇಶ್ವರ ದೇವಸ್ಥಾನ ಆಲಮಟ್ಟಿ ಹಿನ್ನೀರಿನಲ್ಲಿ ಮುಳಗಡೆಯಾಗಿ ಬಾಗಲಕೋಟೆ ಸಿಮೆಂಟ್ ಕಾರ್ಖಾನೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮಾರುತೇಶ್ವರ ವಿಗ್ರಹವನ್ನು ಸ್ಥಳಾಂತರಿಸಿ ಪೂಜೆ ಸಲ್ಲಿಸಲಾಗುತ್ತಿತ್ತು. ತಾತ್ಕಾಲಿಕ ದೇವಸ್ಥಾನವಿದೆ ಆದರೆ ಹೊಸ ದೇವಸ್ಥಾನ ಕಟ್ಟಡಕ್ಕೆ ರಾಮಂದಿರ ನಿರ್ಮಾಣದ ಭೂಮಿ ಪೂಜಾ ದಿನದಂದೇ ಇಲ್ಲಿ ಯೂ ಭೂಮಿ ಪೂಜೆ ನೆರವೇರಿಸಲಾಯಿತು.
ಮಾಜಿ ಶಾಸಕ ನಾರಾಯಣಸಾ ಭಾಂಡಗೆ ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಅಶೋಕ ಲಿಂಬಾವಳಿ, ಅಶೋಕ ಮುತ್ತಿನಮಠ, ಸಿಂಧೆ ಸೇರಿದಂತೆ ನಗರದ ಜನ ಉಪಸ್ಥಿತಿ ತರಿದ್ದರು.