spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಮರಾಜ್ಯದ ಕನಸು ನನಸಾಗಲು ನಾವೆಲ್ಲರೂ ಪ್ರತಿನಿತ್ಯ ರಾಮನ ಆರಾಧನೆ ಮಾಡೋಣ: ಪೇಜಾವರ ಶ್ರೀ

- Advertisement -Nitte

ಹೊಸ ದಿಗಂತ ವರದಿ, ನಾಗಮಂಗಲ: 

ಶ್ರೀ ರಾಮಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಿದಂತೆ ದೇಶದಲ್ಲಿ ರಾಮರಾಜ್ಯದ ಕನಸು ನನಸಾಗಲು ನಾವೆಲ್ಲರೂ ಪ್ರತಿನಿತ್ಯ ರಾಮನ ಆರಾಧನೆ ಮಾಡಬೇಕಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಬುಧವಾರ ನಡೆದ ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣ ಸಂತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ರಾಮಮಂದಿರ ನಿರ್ಮಿಸುವ ಕನಸು 8 ದಶಕಗಳ ನಂತರ ನನಸಾಗಿದೆ. ಕೇವಲ ರಾಮಮಂದಿರ ನಿರ್ಮಾಣವಾದರೆ ಸಾಲದು ದೇಶದಲ್ಲಿ ಮುಂದೆ ರಾಮರಾಜ್ಯ ಆರಂಭವಾಗಬೇಕು ಆಗ ಮಾತ್ರ ರಾಮಮಂದಿರ ನಿರ್ಮಿಸಿದಕ್ಕೆ ಸಾರ್ಥಕವೆನಿಸುವುದು. ರಾಮಮಂದಿರ ನಿರ್”ುಸುವುದರಷ್ಟೇ ಮಹತ್ತರವಾದ ಜವಬ್ದಾರಿ ಮಂದಿರವನ್ನು ಅದೇ ರೀತಿ ಉಳಿಸಿಕೊಳ್ಳುತ್ತೇವೆ ಎಂಬ ಸಂಕಲ್ಪ ಮಾಡಬೇಕಾಗಿದೆ. ನಮ್ಮ “ರಿಯರು ಹಾಕಿ ಕೊಟ್ಟಿರುವ ನಮ್ಮ ಸಂಸ್ಕೃತಿಯ ಪುನರುತ್ಥಾನ ಅಗತ್ಯವಾಗಿ ಆಗಬೇಕಿದೆ. ಕೇವಲ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವುದು ಮಾತ್ರ ರಾಮಮಂದಿರವಾಗದೆ ನಮ್ಮ ದೇಹವೇ ರಾಮಮಂದಿರವಾಗಬೇಕಿದೆ. ಮಂದಿರ ನಿರ್ಮಾಣಕ್ಕಾಗಿ ರಾಜ್ಯದಲ್ಲಿ ಜ.15 ರಿಂದ ಫೆ.05 ರವರೆಗೆ ನಡೆಯುವ ಅಭಿಯಾನಕ್ಕೆ ನಾಡಿನ ಎಲ್ಲಾ ಸಂತರು ಕೈಜೋಡಿಸಿರುವುದು ಶ್ಲಾಘನೀಯ. ಈ ನಿಧಿ ಸಮರ್ಪಣ ಅಭಿಯಾನವು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ದೇಶದಲ್ಲಿನ ಗ್ರಾಮಗಳು ಗ್ರಾಮಗಳಾಗಿ ಉಳಿಯಬೇಕೆಂದರೆ ರಾಮನಾಮ ಜಪಿಸಬೇಕು. ರಾಮನ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ದೇಶದಲ್ಲಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯವಾಗುತ್ತದೆ. ಈ ನಮ್ಮ ನಾಡಿನ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸವಾಗಬೇಕಿದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮರ್ಯಾದಾ ಪುರುಶೋತ್ತಮನಾದ ಶ್ರೀ ರಾಮ ಮಂದಿರ ನಿರ್ಮಾಣ ಮಾಡಲು ದೇಶದ ಎಲ್ಲಾ ಜನತೆ ಸೇರಿದಂತೆ ಮಠ ಮಾನ್ಯಗಳ ಸಂತರೂ ಕೈ ಜೋಡಿಸಬೇಕು ಎಂದು ನುಡಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss