Wednesday, August 17, 2022

Latest Posts

ರಾಮರಾಜ್ಯ ಸ್ಥಾಪನೆ ಬಿಜೆಪಿಯ ಮೂಲ ಉದ್ದೇಶ: ನಳಿನ್ ಕುಮಾರ್ ಕಟೀಲ್

ಹೊಸದಿಗತ ವರದಿ,ತುಮಕೂರು:

ಪ್ರತಿಯೊಬ್ಬ ವ್ಯಕ್ತಿಯ ವಿಕಾಸದ ಮೂಲಕ ಭಾರತದಲ್ಲಿ ರಾಮರಾಜ್ಯ ಸ್ಥಾಪನೆ ಭಾರತೀಯ ಜನತಾ ಪಕ್ಷದ ಮೂಲ ಉದ್ದೇಶ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.

ತುಮಕೂರು ನಗರದ ಸಿದ್ಧಿವಿನಾಯಕ ಮಂಟಪದಲ್ಲಿ ಇಂದು ಜಿಲ್ಲಾಬಿಜೆಪಿ ವಿಷಯಪ್ರಮುಖರ ಪ್ರೌಢಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು
ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಎಂದೂ ಸಹ ಜಾತ್ಯತೀತವಾದದ ಬಗ್ಗೆ ಹೇಳಿರಲಿಲ್ಲ. ಅವರು ಹೇಳಿದ್ದು ರಾಮರಾಜ್ಯ ಸ್ಥಾಪನೆ ಬಗ್ಗೆ. ಗ್ರಾಮಸ್ವರಾಜ್ಯದ ಬಗ್ಗೆ. ವ್ಯಕ್ತಿತ್ವ ನಿರ್ಮಾಣದ ಬಗ್ಗೆ. ವ್ಯಕ್ತಿತ್ವ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಬಗ್ಗೆ ಎಂದರು. ಅದೇ ಕೆಲಸವನ್ನು ಇಂದು ಬಿಜೆಪಿ ಮಾಡುತ್ತಿದೆ ಎಂದರು.

ಆದರೆ ಮಹಾತ್ಮರ ಹೆಸರು ಹೇಳಿಕೊಂಡರು ರಾಜಕಾರಣ ಮಾಡುತ್ತಿರುವ ಕಾಂಗ್ರೆಸಿಗರು ಮಹಾತ್ಮರ ತತ್ವ ಸಿದ್ಧಾಂತಗಳನ್ನು ಗಾಳಿಗೆ ಇಂದಿರಾ ಸೋನಿಯಾ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಇದರಿಂದಲೇ ಅವರು ಲೋಕಸಭೆಯಲ್ಲಿ ಅಧಿಕೃತ ವಿಪಕ್ಷಕ್ಕೆ ಅಗತ್ಯವಾದ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿವೆ ಎಂದರು.

ಜನಸಂಘದ ಮೂಲಕ ಹುಟ್ಟುಪಡೆದ ಬಿಜೆಪಿ ಜನಸಂಘದ ಸಂಸ್ಥಾಪಕರಾದ ಶ್ಯಾಮಪ್ರಸಾದ ಮುಖರ್ಜಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುತ್ತಿದೆ. ಅವರ ಆಶಯವಾದ ವ್ಯಕ್ತಿತ್ವ ನಿರ್ಮಾಣದಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ಅವರ ಆಶಯವಾದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಕಾರ್ಯಕ್ರಮಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುರೇಶ್ ಗೌಡ ವೇದಿಕೆಯಲ್ಲದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!