Sunday, July 3, 2022

Latest Posts

ರಾಮೇಶ್ವರ ದೇವಸ್ಥಾನದ ತುಂಗಾ ತೀರದಲ್ಲಿ ವಿಶೇಷ ಪೂಜಾ ಕಾರ್ಯಕ್ಕೆ ಚಾಲನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ತೀರ್ಥಹಳ್ಳಿ ಪಟ್ಟಣದ ರಾಮೇಶ್ವರ  ದೇವಸ್ಥಾನದ ಆವರಣದಲ್ಲಿರುವ ತುಂಗಾ ತೀರದಲ್ಲಿ ವಿಶೇಷ ಪೂಜಾ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಪುರಾಣ ಪ್ರಸಿದ್ದ ಕಾರ್ಣಿಕ ದೇವಸ್ಥಾನವಾದ ಮಾಧವ ದೇವಸ್ಥಾನ ದಾನಿಗಳಿಂದ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ವರ್ಷ ಗುರುಗ್ರಹವು ಮಕರ ರಾಶಿ ಪ್ರವೇಶ ಮಾಡುವ ಶುಭ ಸಮಯದಲ್ಲಿ ತುಂಗಾನದಿಯಲ್ಲಿ ಪುಷ್ಕರಯೋಗ ಸಂಪನ್ನವಾಗಲಿದ್ದು,  ಈ ಪ್ರಯುಕ್ತ ಶುಕ್ರವಾರ ದಿಂದ  ಡಿಸೆಂಬರ್‌ 1 ರವರೆಗೆ ದೇವಸ್ಥಾನದಲ್ಲಿ ಮತ್ತು ತುಂಗಾ ತೀರದಲ್ಲಿ ವಿಶೇಷ ಪೂಜಾ ಕಾರ್ಯ ನಡೆಯಲಿದೆ. ಧಾರ್ಮಿಕ ಕಾರ್ಯಕ್ಕೆ ಅರ್ಚಕ ಲಕ್ಷ್ಮೀಶ ತಂತ್ರಿಯವರ ಮುಂದಾಳಿನಲ್ಲಿ ಚಾಲನೆ  ನೀಡಲಾಯಿತು.
ದೇವಸ್ಥಾನದಲ್ಲಿ ವಿಷೇಶ ಪೂಜೆ ನಡೆಸಿ ಭಜನೆ ತಂಡ, ವಾದ್ಯ ತಂಡದೊಂದಿಗೆ ಮೆರವಣಿಗೆ ಮೂಲಕ ತುಂಗಾ ನದಿಯವರೆಗೆ ಸಾಗಿ ತುಂಗಾ ನದಿಗೆ ಪೂಜೆ ಸಲ್ಲಿಸಲಾಯಿತು. ತುಂಗಾ ನದಿಗೆ  ಆರತಿ ಮಾಡಿ ದೀಪ ಬೆಳಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಡಾ. ಶ್ರೀಪಾದ್ ದಂಪತಿ, ವೆಂಕಟೇಶ ಪಟವರ್ಧನ್, ಜೆ. ಮಂಜುನಾಥ ಶೆಟ್ಟಿ, ವಾದಿರಾಜ ರಥಬೀದಿ, ಕಿತ್ತನಗದ್ದೆ ಗುಂಡೂರಾವ್, ಕಿತ್ತನಗದ್ದೆ ಮಹೇಶ್, ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನಾ ಅಧಿಕಾರಿ ಹೇಮಲತಾ,   ಶಿವಣ್ಣ  ತುಪ್ಪದಮನೆ, ದೇವಸ್ಥಾನದ ಧರ್ಮದರ್ಶಿ  ಗೀತಾ ವಿಠಲ ಹೆಗಡೆ, ಕಿತ್ತನಗದ್ದೆ ಸಾಂಬಾ ದೇವಸ್ಥಾನದ ಭಜನಾ ತಂಡ, ತಂಡದ ಮುಖ್ಯಸ್ಥರಾದ ಮಂಜುನಾಥ್ ತುಪ್ಪದಮನೆ, ಚೇತನ ಪುರೋಹಿತ್ ಮುಂತಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss