Wednesday, August 17, 2022

Latest Posts

ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮಾರ್ಚನೆ ಪೂಜೆ ಪ್ರಾರಂಭ| ರಾಮಲಲ್ಲಾ ಮಂದಿರ ಶಿಲಾನ್ಯಾಸಕ್ಕೆ ಇನ್ನು ಒಂದೇ ದಿನ ಬಾಕಿ

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಶ್ರೀರಾಮಾರ್ಚನೆ ಪೂಜೆ ಪ್ರಾರಂಭವಾಗಿದೆ.

ಈ ಪೂಜೆಯಲ್ಲಿ ರಾಮನನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗುವುದು. ನಾಲ್ಕು ಹಂತಗಳಲ್ಲಿ ರಾಮನನ್ನು ಪೂಜಿಸಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ.

ಮೂರನೇ ಹಂತದಲ್ಲಿ ರಾಮಲಲ್ಲಾನ ತಂದೆ ದಶರಥ ಹಾಗೂ ಮೂವರು ಪತ್ನಿಯರನ್ನು ಪೂಜಿಸಲಾಗುವುದು ಹಾಗೂ ರಾಮನ ಮೂವರು ಸಹೋದರರಾದ ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ರನ್ನು ಪೂಜಿಸಲಾಗುವುದು. ಹಾಗೆಯೇ ಹನುಮಂತನನ್ನು ಪೂಜಿಸಿ ನಾಲ್ಕನೇ ಹಂತದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುವುದು ಎಂದರು.

ಈ ವೇಳೆಗೆ ಅಯೋಧ್ಯರಯಲ್ಲಿ ಬಿಗಿ ಬಂದೋಬಸ್ತ್  ಮಾಡಲಾಗಿದ್ದು, ದೇವಸ್ಥಾನದ ಸುತ್ತ ಮುತ್ತಲು ಹೂವು, ದೀಪಗಳಿಂದ ಅಲಂಕರಿಸಲಾಗಿದೆ. ಪಟ್ನಾ ಮಹವೀರ್ ಮಂದಿರ್ ಟ್ರಸ್ಟ್ ಈಗಾಗಲೇ 1.5 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ಇದನ್ನು ಭಕ್ತಾಧಿಗಳು ಪ್ರಸಾದಗಳನ್ನು ವಿತರಿಸಲಾಗುವುದು.

ಸೋಮವಾರ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥರು ಅಯೋಧ್ಯೆಗೆ ಭೇಟಿ ನೀಡಿ ಕಾರ್ಯಕ್ರಮದ ತಯಾರಿಯನ್ನು ಪರಿಶೀಲಿಸಿದ್ದರು. ನಾಳೆ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!