ಹೊಸ ದಿಗಂತ ವರದಿ, ಔರಾದ್:
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 2021 ರ ಜ. 15 ರಿಂದ ಫೆ. 27 ರವರೆಗೆ ವಿಶ್ವ ಹಿಂದು ಪರಿಷತ್ ರಾಜ್ಯದಲ್ಲಿ ಅಭಿಯಾನ ಹಮ್ಮಿಕೊಂಡಿರುವ ಪ್ರಯುಕ್ತ ಈ ನಿಧಿ ಸಂಗ್ರಹ ಅಭಿಯಾನಕ್ಕೆ ತಾಲೂಕಿನಲ್ಲಿ ವ್ಯಾಪಕ ಮನ್ನಣೆ ಸಿಕ್ಕಿದೆ. ರಾಮ ಮಂದಿರ ನಿರ್ಮಾಣವು ಜಾಗೃತ ಹಿಂದು ಶಕ್ತಿಯ ಪುನರುಸ್ಥಾನದ ಸಂಕೇತವಾಗಿದ್ದು, ಮಂದಿರ ರಾಷ್ಟ್ರ ಮಂದಿರದ ರೂಪ ಪಡೆಯಲಿದೆ. ಅಭಿಯಾನಕ್ಕೆ ತಾಲುಕಿನಾಧ್ಯಂತ ಎಲ್ಲೆಡೆಯಿಂದ ಉತ್ತಮ ಸ್ಪಂಧನೆ ದೊರಕುತ್ತಿದೆ.
ತಾಲೂಕಿನ ತೆಲಂಗಾಣ ಮತ್ತು ಮಹಾರಾಷ್ಟ್ರದ ಗಡಿಯಂಚಿನ ಕರ್ನಾಟಕದ ಕುಗ್ರಾಮ ಚಿಂತಾಕಿಯಲ್ಲಿನ ಮುಸ್ಲಿಂ ಸಮುದಾಯದ ಮುಖಂಡ ಖಾಜಮೀಯಾ ಅವರ ನೇತೃತ್ವದ ತಂಡ ಜಾತಿ-ಧರ್ಮ, ಬೇಧ ಭಾವಗಳನ್ನು ಮರೆತು ಸ್ವಯಂ ಪ್ರೇರಿತರಾಗಿ ಸಮೂದಾಯದ ಸಹಭಾಗಿತ್ವದಲ್ಲಿ ಬೆರೆತುಕೊಂಡು , ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಮೂಲಕ ನಿರಂತರವಾಗಿ 15 ದಿನಗಳಿಂದ ರಾಮ ಮಂದಿರ ನಿಧಿ ಸಂಗ್ರಹ ಸಮರ್ಪಣೆಯಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ಭಾತೃತ್ವ ಸಂಧೇಶಗಳನ್ನು ನೀಡಿ, ರಾಮ ರಹೀಮ ಇಬ್ಬರು ಒಂದೆ ಎಲ್ಲರಿಗೂ ಎನ್ನುವ ಸಾಮರಸ್ಯದ ನೈಜ ಸಂಗತಿ ಎಲ್ಲರಿಗೂ ನೀಡುತ್ತಿದ್ದಾರೆ. ಚಿಂತಾಕಿ ಗ್ರಾಮದ ಹಾಗು ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಮುಸ್ಲೀಂ ಕುಟುಂಬಗಳಿಗೆ ತೆರಳಿ , ರಾಮ ಮಂಧಿರ ನಿಧಿ ಸಂಗ್ರಹಣೆಗೆ ಈ ತಂಡದವರು ಕೈಜೋಡಿಸಿದ್ದಾರೆ.
ಈ ಮುಸ್ಲೀಂ ಯುವಕರು ತನ್ನಿಂದ ತಾನೇ ಪ್ರೇರಿತರಾಗಿ 15 ದಿನಗಳಲ್ಲಿ ಅಂದಾಜು 150 ಮುಸ್ಲಿಂ ಪರಿವಾರಗಳಿಗೆ ಭೇಟಿ ನೀಡಿ 40 ದಿಂದ 50 ಸಾವಿರ ರೂ.ಗಳು ಮೊತ್ತದ ಹಣ ಜಮಾ ಮಾಡಿ ತಾಲೂಕು ಸಂಚಾಲಕರಿಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಕ್ರೀಯಾಶೀಲರಾಗಿ ರಾಮ ಮಂದಿರದ ನಿಧಿ ಸಂಗ್ರಹ ಕಾರ್ಯದಲ್ಲಿ ತೋಡಗಿಕೊಂಡು ಇನ್ನಷ್ಟು ಹೆಚ್ಚಿನ ಅಳಿಲು ಸೇವೆ ಮಾಡಿ, ಇನ್ನು ಹೆಚ್ಚಿನ ನಿಧಿ ಜಮಾ ಕಾರ್ಯದಲ್ಲಿ ತೊಡಗಿಕೊಳ್ಳುವ ಛಲ ತೊಟ್ಟಿದ್ದಾರೆ. ಇವರ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿ ಸಂತಸ ಪಡುತ್ತಿದ್ದಾರೆ.
ತಾಲುಕಿನಾಧ್ಯಂತ ತಲಾ 5 ಮಂದಿಯನ್ನು ಒಳಗೊಂಡ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದಾರೆ. ರೂ 10,ರೂ, 100 ಹಾಗು ರೂ 1000, ಮುದ್ರಿತ ಕೂಪನ್ ಗಳ ಮೂಲಕ ಹಣ ಸಂಗ್ರಹಣೆ ನಡೆಯುತ್ತಿದೆ. ತಾಲುಕಿಗೆ ಸುಮಾರು 25 ಲಕ್ಷ ರೂಗಳ ಸಂಗೃಹ ನಿಧಿ ಭರ್ತಿ ಮಾಡುವ ಕಾರ್ಯಕ್ರಮವಿದ್ದು, ಈಗಾಗಲೇ 5 ಲಕ್ಷ ರೂಗಳು ಜಮಾ ಆಗಿದ್ದು, ಎಲ್ಲ 25 ಲಕ್ಷ ರೂಗಳ ಟೋಕನ್ ಗಳು ದಾನಿಗಳು ಪಡೆದಿದ್ದು, ವಾರದೊಳಗೆ ಎಲ್ಲ ಹಣ ಜಮಾ ಆಗಲಿದೆ ಎಂದು ಸಮರ್ಪಣಾ ನಿಧಿಯ ಕಾರ್ಯಕರ್ತರು ಮಾಹಿತಿ ನಿಡಿದ್ದಾರೆ.