Sunday, March 7, 2021

Latest Posts

ರಾಮ ಮಂದಿರ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಲು ಮನವಿ: ಸಂಚಲನ ಮೂಡಿಸಿದ ಭವ್ಯ ಶೋಭಾಯಾತ್ರೆ

ಹೊಸ ದಿಗಂತ ವರದಿ ಧಾರವಾಡ:

ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಸಮತಿಯಿಂದ ಭಾನುವಾರ ಹಮ್ಮಿಕೊಂಡ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾಭಿಯಾನದ ಭವ್ಯ ಶೋಭಾಯಾತ್ರೆ ನಗರದಲ್ಲಿ ಸಂಚರಿಸಿ ಸಂಚಲನ ಮೂಡಿಸಿತು.

ಶೋಭಾಯಾತ್ರೆ ಸಂಚಿರಿಸುವ ಮಾರ್ಗದ ಮನೆಗಳ ಮುಂಭಾಗದಲ್ಲಿ ಬಣ್ಣಬಣ್ಣದ ರಂಗು ರಂಗಿನ ರಂಗೋಲಿ ಚಿತ್ತಾರ ಅದ್ಧೂರಿ ಸ್ವಾಗತ ನೀಡಿತು. ಕೊಪ್ಪದಕೇರಿ ಶಿವಾಲಯದಿಂದ ಹೊರಟ ಯಾತ್ರೆಯಲ್ಲಿ ಸಹಸ್ರ ಸಂಖ್ಯೆಯ ಶ್ರೀರಾಮ ಭಕ್ತರು ಪಾಲ್ಗೊಂಡದ್ದರು.

ಭವ್ಯ ಶ್ರೀರಾಮನ ಭಾವಚಿತ್ರದ ಆರಂಭಗೊoಡ ಶೋಭಾಯಾತ್ರೆಯಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಹೂವುಮಳೆ ಸುರಿಸಲಾಯಿತು. ಶ್ರೀರಾಮ ನಾಮ ಪಠಣದ ಜತೆಗೆ ಶ್ರೀರಾಮನ ಘೋಷಣೆ ಹಾಕುತ ನಗರದಲ್ಲಿ ಹಬ್ಬದ ವಾತಾವರ್ಣ ನಿರ್ಮಾಣ ಮಾಡಿದರು.

ಕೊಪ್ಪದಕೇರಿ ಶಿವಾಲಯದಿಂದ ಆರಂಭಗೊoಡ ಶೋಭಾಯಾತ್ರೆ ಮಾಳಾಪುರ, ಕಮಲಾಪುರ, ಮರಾಠಾ ಕಾಲೋನಿ, ಗೋಲರ ಕಾಲೋನಿ, ಮದಿಹಾಳ ಮಾರ್ಗ ವಿವಿಧಡೆ ಸಂಚರಿಸಿ, ಮೃತ್ಯುಂಜಯ ನಗರ ಮಾರ್ಗವಾಗಿ ಮುರಘಾಮಠದಲ್ಲಿ ಸಮಾಪ್ತಿಗೊಂಡಿತು.

ಶೋಭಾಯಾತ್ರೆಗೆ ಚಾಲನೆ ನೀಡಿದ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಶ್ರೀರಾಮ ಭಾರತೀಯ ಸಂಸ್ಕೃತಿ. ಜಗತ್ತಿನ ಆದರ್ಶ ಪುರುಷ. ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸರ್ವರು ಉದಾರ ದೇಣಿಗೆ ನೀಡಲು ಕೋರಿದರು.

ಶಾಸಕ ಅಮೃತ ದೇಸಾಯಿ, ಜಗತ್ತಿನ ಇತಿಹಾಸದಲ್ಲಿ ಅಯೋಧ್ಯೆಯಲ್ಲಿ ಹೊಸ ಅಧ್ಯಾಯ ಸೃಷ್ಠಿಯಾಗುತ್ತಿದೆ. ಇದಕ್ಕೆ ಸರ್ವ ಸಮಾಜದ ಬಾಂಧವರು ಜಾತಿ-ಧರ್ಮ, ಮತ-ಪಂಥ ತೊರೆದು ಸರ್ವರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂಧರ್ಬದಲ್ಲಿ ಮಾಜಿ ಶಾಸಕಿ ಸೀಮಾ ಮಸುತಿ, ಮೋಹನ ರಾಮದುರ್ಗ, ಅರವಿಂದ ಏಗನಗೌಡರ, ಗುರು ಸಾವಳಗಿ, ನೀತಿನ ರಾಮದುರ್ಗ, ಮಂಜುನಾಥ ಹಾವೇರಿ, ಸಂಗಮೇಶ ಹನಸಿ, ಮಂಜುನಾಥ ಬೆನ್ನೂರ, ಮಂಜುನಾಥ ನಡಟ್ಟಿ ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss