Wednesday, June 29, 2022

Latest Posts

ರಾಮ ಮಂದಿರ ನಿರ್ಮಾಣದ ವೆಚ್ಚ 1,100 ಕೋಟಿ ರೂ.: ಮೂರು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಯೋಧ್ಯೆಯಲ್ಲಿ  ಶ್ರೀ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದ್ದು, ರಾಮ ಮಂದಿರದ ನಿರ್ಮಾಣಕ್ಕೆ ಸುಮಾರು 1,100 ಕೋಟಿ ರೂ. ವೆಚ್ಚವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವೆಚ್ಚದಡಿ ಮೂರೂವರೆ ವರ್ಷಗಳಲ್ಲಿ ರಾಮ ಮಂದಿರದ ನಿರ್ಮಾಣವು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

ಮಂದಿರದ ಮುಖ್ಯ ದೇವಸ್ಥಾನ ನಿರ್ಮಾಣಕ್ಕೆ 300 ಕೋಟಿ ರೂ.ಗಳಿಂದ 400 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇಡೀ ದೇವಸ್ಥಾನ ಪೂರ್ಣಗೊಳ್ಳಲು 1,100 ಕೋಟಿ ರೂ.ಗಿಂತ ಕಡಿಮೆ ಆಗದು. ಇದು ನಾವು ಗ್ರಹಿಸಿರುವ ಅಂದಾಜು ಮೊತ್ತ ಎಂದಿದ್ದಾರೆ.

ಈಗಾಗಲೇ ದೇವಾಲಯದ ನಿರ್ಮಾಣ ಕಾರ್ಯ ನಡೆದಿದ್ದು, ಬಾಂಬೆ, ದೆಹಲಿ, ಮದ್ರಾಸ್, ಗುವಾಹಟಿ ಸೇರಿದಂತೆ ಇತರೆ ಕಡೆಗಳಿಂದ ನುರಿತ ವಿಶೇಷ ಎಂಜಿನಿಯರ್‌ಗಳು ಅಡಿಪಾಯಕ್ಕಾಗಿ ಯೋಜನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಗಿರಿಜಿ ಮಹಾರಾಜ್ ಹೇಳಿದರು.

ಕೇಂದ್ರ ಸ್ಥಾಪಿಸಿದ ಟ್ರಸ್ಟ್‌ಗೆ ಇದುವರೆಗೆ ಆನ್‌ಲೈನ್‌ನಲ್ಲಿ 100 ಕೋಟಿ ರೂ.ಗಿಂತ ಹೆಚ್ಚಿನ ದೇಣಿಗೆ ಹರಿದು ಬಂದಿದೆ ಎಂದು ಮಾಹಿತಿ ನೀಡಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss