Sunday, August 14, 2022

Latest Posts

ರಾಮ ಮಂದಿರ ನಿರ್ಮಾಣ ನಮ್ಮ ಸಂಸ್ಕೃತಿಯ ಪ್ರತೀಕ: ಶರಣಬಸಪ್ಪಾ ಅಪ್ಪಾ

ಹೊಸ ದಿಗಂತ ವರದಿ,ಕಲಬುರಗಿ:

ರಾಮ ಮಂದಿರ ನಿರ್ಮಾಣದ ಕಾರ್ಯವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮ ಧರ್ಮದ ಶಾಶ್ವತ ಭಕ್ತಿಯ ಸಂಕೇತ, ಅದರೊಂದಿಗೆ ನಮ್ಮ ರಾಷ್ಟ್ರದ ಭಾವೈಕ್ಯದ ಪ್ರತೀಕವು ಆಗಿದೆ ಎಂದು ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ, ಶ್ರೀ ಶರಣಬಸಪ್ಪಾ ಅಪ್ಪಾ ನುಡಿದರು.
ಅವರು ಶುಕ್ರವಾರ ನಗರದ ಶರಣಬಸವೇಶ್ವರ ಸಂಸ್ಥಾನದಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಫಣೆ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಭಾರತ ದೇಶದ ಕೋಟ್ಯಾಂತರ ಭಕ್ತರ ಸಂಕಲ್ಪ ರಾಮ ಮಂದಿರ. ಕೇವಲ ಅಯೋದ್ಯೆ ಅಷ್ಟೇ ಅಲ್ಲ, ಎಲ್ಲಾ ಆಯಾಮಗಳಲ್ಲಿ ಹೊಸ ಸ್ಫೂರ್ತಿ ಎಂದು ಹೇಳಿದರು. ಈ ರಾಮ ಮಂದಿರ ನಿರ್ಮಾಣದಿಂದಪ್ರಪಂಚದಾದ್ಯಂತದ ಜನರು ಮತ್ತು ಭಕ್ತ ಸಮೂಹ ಶ್ರೀ ರಾಮನ ದರ್ಶನಕ್ಕೆ ಭಾರತಕ್ಕೆ ಆಗಮಸುತ್ತದೆ ಎಂದರು.ಗತಕಾಲದಿಂದಲೂ ಹಿಂದುಗಳ ಕೇವಲ ಕನಸ್ಸಾಗಿದ್ದ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಇಂದು ಮಹತ್ವದ ದಿನವಾಗಿದ್ದೂ, ತದನಿಮಿತ್ತ ಜಾತಿ, ಧರ್ಮ ಭೇದವಿಲ್ಲದೇ ಧನ ಸಂಗ್ರಹಿಸುವ ಯೋಜನೆಯಲ್ಲಿ ಜಿಲ್ಲೆಯ ಜನತೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು. ಜಿಲ್ಲೆಯ ಜನತೆ 10, 100, 1000ರ ನಿಧಿಯ ಸಂಗ್ರಹಣೆ ನಡೆಯಲಿದೆ. ಇನ್ನೂ 2000 ಸಹಾಯಧನ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದಿಂದ ಶ್ರೀ ರಾಮನ ಭವ್ಯಮಂದಿರ ನಿರ್ಮಾಣಕ್ಕೆ 25 ಲಕ್ಷ ನಿಧಿಯನ್ನು ನೀಡುವುದಾಗಿ ಹೇಳಿದರು.
17ರಂದು ಮನೆ ಮನೆಗೆ
ಜಿಲ್ಲೆಯಲ್ಲಿ ಶ್ರೀ ರಾಮ ಮಂದಿರದ ನಿಧಿ ಸಮರ್ಫಣೆ ಅಭಿಯಾನದ ಸಲುವಾಗಿ ಇದೇ 17ರಂದು ಮನೆ ಮನೆಗೆ ಕಾರ್ಯಕರ್ತರು 5 ಜನರ ಗುಂಪುಗಳಾಗಿ ತೆರಳಲಿದ್ದಾರೆ. ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಭವ್ಯ ರಾಮನ ಮಂದಿರ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಹೇಳಿದರು. ಮಾತೋಶ್ರೀ ದಾಕ್ಷಾಯಣಿ ಅಮ್ಮ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಬಿ, ಬಸವರಾಜ ದೇಶಮುಖ, ಲಿಂಗರಾಜ ಶಾಸ್ತ್ರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಭೌದ್ದಿಕ ಪ್ರಮುಖರಾದ ಕೃಷ್ಣಾ ಜೋಶಿ, ವಿಭಾಗ ಪ್ರಚಾಕರಾದ ವಿಜಯ ಮಹಾಂತೇಶ, ಲಿಂಗರಾಜ ಅಪ್ಪ, ಇನ್ನೂಳಿದಂತೆ ಸಂಸಧ ಉಮೇಶ ಜಾಧವ, ಬಿ.ಜಿ.ಪಾಟೀಲ, ಶಾಸಕರಾದ ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ, ಶಶೀಲ ನಮೋಶಿ, ದಯಾನಂದ ಧಾರವಾಡಕರ್, ಸೇರಿದಂತೆ ಲಿಂಗರಾಜ ಶಾಸ್ತಿ, ಸೇರಿದಂತೆ ಸಂಸ್ಥಾನದ ಅನೇಕ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss