Wednesday, August 17, 2022

Latest Posts

ರಾಮ ಮಂದಿರ ನಿರ್ಮಾಣ ನೂರು ಕೋಟಿ ಹಿಂದುಗಳ ತ್ಯಾಗದ ಪ್ರತೀಕ: ಪ್ರಮೋದ ಮುತಾಲಿಕ್

ಯಲ್ಲಾಪುರ: ರಾಮಮಂದಿರ ಕೇವಲ ಕಳಸ, ಶಿಖರವಿಡುವ, ಮಂದಿರವಾಗಿರದೇ ೧೦೦ ಕೋಟಿ ಹಿಂದೂಗಳ ಭಾವನಾತ್ಮಕ ಭಕ್ತಿ ತ್ಯಾಗದ ಪ್ರತೀಕವಾಗಿದೆ ಎಂದು ಶ್ರೀರಾಮ ಹಿಂದು ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಅವರು ಗುರುವಾರ ಪಟ್ಟಣದ ಜೋಡುಕೇರಿ ಮಾರುತಿ ದೇವಸ್ಥಾನದಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸಕ್ಕೆ ಅಂಜನಾದ್ರಿ ಬೆಟ್ಟದಿಂದ ತಂದಿರುವ ಬೆಳ್ಳಿಲೇಪಿತ ಶಿಲೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.
ಅಂಜನಾದ್ರಿಯಿಂದ ಅಯೋಧ್ಯೆಗೆ, ಹನುಮನ ಜನ್ಮಸ್ಥಳದಿಂದ ರಾಮನ ಜನ್ಮಸ್ಥಳಕ್ಕೆ, ರಾಮನ ಬಂಟ ಹನುಮನ ಸಂಬಂಧ ಅವಿನಾಭಾವವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಯೋಧ್ಯೆಗೆ ಕರ್ನಾಟಕವನ್ನು ಜೋಡಿಸಲಾಗುತ್ತಿದೆ. ಈ ಶಿಲೆಗೆ ಪಂಚಪೀಠಾಧಿಶಗಳಲ್ಲಿ ಒಂದಾದ ಉಜ್ಜಯಿನಿಯಲ್ಲಿ ವಿಶೇಷ ಪೂಜೆಯ ಮೂಲಕ ಚಾಲನೆ ನೀಡಲಾಗಿದ್ದು, ವಿವಿಧ ಜಿಲ್ಲೆಗಳ ಮಾರ್ಗವಾಗಿ ಇದೀಗ ಯಲ್ಲಾಪುರಕ್ಕೆ ಬಂದಿದೆ
ಶ್ರೀರಾಮ ಮಂದಿರ ಶಿಲಾನ್ಯಾಸದ ಅ.೫ರೊಳಗಾಗಿ ಉಡುಪಿಯ ಪೇಜಾವರ ಮಠದ ಶ್ರೀಗಳ ಮೂಲಕ ಅಯ್ಯೋಧ್ಯೆಗೆ ಕಳುಹಿಸಲಾಗುವುದು ಎಂದರು.
ಕೇಂದ್ರ ಸರಕಾರ ಕಿಷ್ಕಿಂದೆಯಿಂದ ಅಯ್ಯೋಧ್ಯೆವರೆಗೆ ರೈಲು ಸಂಚಾರ ಪ್ರಾರಂಭಿಸಿ ಪವಿತ್ರ ಯಾತ್ರೆಗೆ ಅನುಕೂಲ ಮಾಡಿಕೊಡಬೇಕು
ಎಂದರು.
ರಾಮಮಂದಿರ ನಿರ್ಮಾಣಕ್ಕೆ ಗ್ರಾಮದೇವಿ ಸ್ಥಾನದ ಪವಿತ್ರ ಮಣ್ಣು, ಹಾಗೂ ತಿಲಕ ಚೌಕ ಯುವಕ ಮಂಡಲದಿಂದ ಶ್ರಿರಾಮ ನಾಮ ಹೊಂದಿದ ಬೆಳ್ಳಿಯ ಸಿಕ್ಕಾಗಳನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಶ್ರೀರಾಮ ಸೇನೆಯ ಉಪಾಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಮುಖರಾದ ಬಾಬು ಬಾಂದೇಕರ, ಅರ್ಚಕ ನಾರಾಯಣ ಭಟ್ಟ, ಗೋಪಾಲಕೃಷ್ಣ ಗಾಂವಕರ, ಸೋಮೇಶ್ವರ ನಾಯ್ಕ, ಪ್ರಸಾದ ಹೆಗಡೆ, ಸತೀಶನಾಯ್ಕ, ಅಮೀತ ಅಂಗಡಿ, ಸಂತೋಷ ನಾಯ್ಕ, ಪ್ರಕಾಶ ಕಟ್ಟಿಮನಿ, ರಜತ ಬದ್ದಿ, ಶಿವು ಕವಳಿ, ಸಿದ್ದಾರ್ಥ ನಂದೋಳ್ಳಿ ಮಠ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!