Thursday, August 11, 2022

Latest Posts

ರಾಮ ಮಂದಿರ ಭೂಮಿ ಪೂಜೆ ಭಾರತೀಯರಿಗೆ ಭಾವನಾತ್ಮಕ ಕ್ಷಣ: ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ

ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕೆ ನೆರವೇರಿಸಿದ ಭೂಮಿ ಪೂಜೆಯು ಭಾರತೀಯ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಂತ ಭಾವಪೂರ್ಣ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಹೇಳಿದ್ದರು.

ಶ್ರೀರಾಮ ಹಾಗೂ ಸೀತೆಯನ್ನು ಸ್ಮರಿಸಕೊಂಡು ಭಾಷಣ ಪ್ರಾರಂಭಿಸಿದ ಪ್ರಧಾನಿ ಮೋದಿ ದೇಶದಲ್ಲಿನ ರಾಮನ ಭಕ್ತರಿಗೆ ಶುಭಾಶಯ ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಪ್ರಕಾಶಿಕವಾಗಿದ್ದು, ಇಡೀ ದೇಶದ ಜನತೆಗೆ ಇದೊಂದು ಭಾವನಾತ್ಮಕ ಕ್ಷಣವಾಗಿದೆ. ಇಷ್ಟು ವರ್ಷದ ಕಾಯುವಿಕೆ ಇಂದು ಅಂತ್ಯವಾಗಿದೆ. ಇಷ್ಟು ವರ್ಷಗಳ ಕಾಲ ಟೆಂಟ್ ನಲ್ಲಿದ್ದ ರಾಮ ಲಲ್ಲಾಗೆ ಇಂದಿನಿಂದ ಭವ್ಯ ಮಂದಿರದಲ್ಲಿರುತ್ತಾನೆ ಎಂದರು.

ರಾಮ ಮಂದಿರ ನಿರ್ಮಾಣ ಕಾರ್ಯವು ಇತಿಹಾಸವನ್ನು ಮರು ಸೃಷ್ಟಿಮಾಡಿದೆ ಎಂದು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಭಾರತದ ಈ ಮಹತ್ವದ ಹಾಗೂ ಐತಿಹಾಸಿಕ ಕಾರ್ಯಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದಕ್ಕೆ ರಾಮ ಜನ್ಮ ಭೂಮಿ ಟ್ರಸ್ಟ್ ಗೆ ಧನ್ಯವಾದ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss