Thursday, August 11, 2022

Latest Posts

ರಾಯಗಢ| 5 ಅಂತಸ್ತಿನ ಕಟ್ಟಡ ಕುಸಿತ: 60 ಮಂದಿಯ ರಕ್ಷಣೆ: 30 ಮಂದಿ ಅವಶೇಷದಡಿ ಸಿಲುಕಿರುವ ಭೀತಿ

ಮಹಾರಾಷ್ಟ್ರ: ರಾಯಗಢ ಜಿಲ್ಲೆಯ ಮಹಾದ್‌ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದ ನಂತರ ಕನಿಷ್ಠ 60 ಜನರನ್ನು ರಕ್ಷಿಸಲಾಗಿದೆ ಮತ್ತು ಕನಿಷ್ಠ 30 ಮಂದಿ ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕುವ ಭೀತಿ ಇದೆ ಎಂದು ಮಹಾರಾಷ್ಟ್ರ ಸಚಿವ ಅದಿತಿ ತತ್ಕರೆ ಮಂಗಳವಾರ ಹೇಳಿದ್ದಾರೆ.

ರಾಯಗಢ ಜಿಲ್ಲೆಯ ಕಾಜಲ್‌ಪುರ ಪ್ರದೇಶದಲ್ಲಿ ನಿನ್ನೆ ಸಂಜೆ ಕಟ್ಟಡ ಕುಸಿದು ಬಿದ್ದಿರುವ ಸ್ಥಳಕ್ಕೆ ಮಹಾರಾಷ್ಟ್ರ ಸಚಿವ ಅದಿತಿ ತತ್ಕರೆ ಮತ್ತು ಏಕನಾಥ ಶಿಂಧೆ ಭೇಟಿ ನೀಡಿದರು.

ಸುಮಾರು 60 ಜನರನ್ನು ರಕ್ಷಿಸಲಾಗಿದ್ದು, 25-30 ಮಂದಿ ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿರುವವ ಭೀತಿಯಿದೆ. ಮೂರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೂ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ಗಂಭೀರ ಗಾಯಗೊಂಡವರನ್ನು ಸುಧಾರಿತ ಚಿಕಿತ್ಸೆಗಾಗಿ ಮುಂಬೈಗೆ ಕರೆದೊಯ್ಯಲಾಗಿದೆ ಹಾಗೂ ಘಟನೆಯ ಕುರಿತು ತನಿಖೆ ಪ್ರಾರಂಭವಾಗಿದೆ. ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss