Thursday, July 7, 2022

Latest Posts

ರಾಯಚೂರಿನ ಸುಮಾರು 60 ಮಂದಿ ಕೂಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ ಶಾಸಕ ಉಮಾನಾಥ ಕೋಟ್ಯಾನ್

ಮೂಡಬಿದ್ರೆ: ಕೋರೊನ ಮಾರಕರೋಗದ ನಿಮಿತ್ತ ದೇಶವ್ಯಾಪ್ತಿ ಬಂದ್ ಹಿನ್ನಲೆಯಲ್ಲಿ ರಾಯಚೂರಿನ ಸುಮಾರು 60 ಮಂದಿ ಕೂಲಿ ಕಾರ್ಮಿಕರಿಗೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಸಮಾಜ ಮಂದಿರದ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಅನುಮತಿಯ  ಮೇರೆಗೆ ಸಮಾಜ ಮಂದಿರದಲ್ಲಿ ನಿಲ್ಲುವ  ವ್ಯವಸ್ಥೆಯನ್ನು ಮಾಡಲಾಯಿತು.
ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭೇಟಿ  ನೀಡಿ ಮೂಡಬಿದ್ರಿ ಠಾಣಾಧಿಕಾರಿ ಹಾಗೂ ತಹಶೀಲ್ದಾರರನ್ನು ಸ್ಥಳಕ್ಕೆ ಕೆರೆಸಿ ಎಲ್ಲಾ ಕಾರ್ಮಿಕರಿಗೂ ಮುಂದಿನ ದಿನಗಳಲ್ಲಿ ಬೇಕಾಗುವ ಊಟದ ವ್ಯವಸ್ಥೆ ಹಾಗೂ ಅವರಿಗೆ ಬೇಕಾದ ಎಲ್ಲಾ  ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಸೂಚಿಸಿದರು. ಶಾಸಕರ ಸೂಚನೆಯಂತೆ ಬಿಹಾರದಿಂದ ಬಂದ ಸುಮಾರು ಐವತ್ತುಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರಿಗೆ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ  ಊಟ ಉಪಾಹಾರ ತಯಾರುಮಾಡಿ  ವಿತರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss