ರಾಯಚೂರು: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೋನ ಸೋಂಕು. ಹಾಗೆಯೇ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ.ಕೋವಿಡ್ ದೃಢಪಟ್ಟಿದ್ದರಿಂದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ವಯೋವೃದ್ಧೆಯರು ಮೃತರಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 10ಕ್ಕೆ ಏರಿಕೆಯಾಗಿದೆ.
ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರಾಯಚೂರು ನಗರ ಗೋಲ್ ಮಾರ್ಕೆಟ್ ನಿವಾಸಿಯಾಗಿದ್ದ ಕಲಾವತಿ ಬರಮಾಜಿರಾವ್ (65) ಮತ್ತು ಎದೆನೋವು, ಬೆನ್ನುನೋವಿನಿಂದ ಬಳಲುತ್ತಿದ್ದ ಸಿರವಾರದ ತುಕ್ಕಾಬಾಯಿ ರಾಮಚಂದ್ರ (80) ಮೃತರಾಗಿದ್ದಾರೆ.