ಹೊಸ ದಿಗಂತ ಆನ್ಲೈನ್ ಡೆಸ್ಕ್:
ಬೆಳಗಾವಿ ನಗರದ ಹೊರವಲಯ ಪೀರನವಾಡಿ ಬಳಿಯಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಮೇಲೆ ವ್ಯಕ್ತಿ ಓರ್ವ ಕಾಲಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಸೋಮವಾರ ಬೆಳಗಾವಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಲು ಕಾರಣವಾಗಿತ್ತು.
ಆಗಸ್ಟ್ ತಿಂಗಳಿನಲ್ಲಷ್ಟೇ ಇಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿತ್ತು. ಈ ಸಂದರ್ಭ ಕೆಲವು ಕಹಿ ಘಟನೆಗಳೂ ನಡೆದಿದ್ದವು. ಇದರ ಬೆನ್ನಿಗೇ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದು ಆತಂಕ ಹುಟ್ಟುಹಾಕಿತ್ತು. ಆದರೆ ಈತ ಪೀರನವಾಡಿ ಗ್ರಾಮದ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಮೂರ್ತಿ ಮೇಲೆ ಏರಲೆತ್ನಿಸಿದ್ದ ಈತನನ್ನು ನಂತರ ಸಾರ್ವಜನಿಕರು ಕೆಳಗಿಳಿಸಿದ್ದಾರೆ.