Thursday, July 7, 2022

Latest Posts

ರಾಶಿ ರಾಶಿ, ಹೆಣ, ಮುಗಿಬಿದ್ದ ಜನತೆ, ವೈದ್ಯರು ಕಂಗಾಲು: ಬ್ರೆಜಿಲ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಜಾಗವೇ ಇಲ್ಲ !

ರಿಯೋಡಿ ಜನೀರೋ : ಕೊರೋನಾ ಸೋಂಕಿಗೆ ಪ್ರಪಂಚದ ಅತಿ ದೊಡ್ಡ ಕಾಫೀನಾಡು ತತ್ತರಿಸಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲದಂತಾಗಿದೆ !
ಬ್ರೆಜಿಲ್ ದೇಶದಲ್ಲಿ ದಿನೇ, ದಿನೇ ಸೋಂಕಿತರು ಹಾಗೂ ಮೃತರ ಸಂಖ್ಯೆ ದ್ವಿಗುಣವಾಗುತ್ತಿದೆ. ಮೃತರನ್ನು ಸಾಮೂಹಿಕವಾಗಿ ಹೂಳಲು ಜನತೆ ಸಿದ್ದರಾಗಿದ್ದಾರೆ. ಶನಿವಾರದ ವೇಳೆಗೆ ಇಲ್ಲಿ ೩,೨೦೦ಕ್ಕೂ ಅಧಿಕ ಮಂದಿ ಮೃತರಾಗಿದ್ದು ಸುಮಾರು ೫೩ ಸಾವಿರ ಮಂದಿ ಕೊರೋನಾ ಸೋಂಕಿನಿಂದ ಪರದಾಡುತ್ತಿದ್ದಾರೆ. ಬಹಳಷ್ಟು ಮಂದಿ ಸೋಂಕಿತರು ಆಸ್ಪತ್ರೆಗಳಿಗೆ ಎಡತಾಕಿದರೂ, ಅವರಿಗೆ ಅಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗಿದೆ. ಒಂದು ಕಡೆ ರಾಶಿ, ರಾಶಿಯಾಗಿ ಉರುಳಿದ ಶವಗಳು. ಮತ್ತೊಂದು ಕಡೆ ಗುಂಪು, ಗುಂಪಾಗಿ ಚಿಕಿತ್ಸೆಗೆಂದು ದಾವಿಸುತ್ತಿರುವ ಸೋಂಕಿತರು. ಇದರಿಂದ ಇಲ್ಲಿನ ಜನತೆ ಕೆಂಗೆಟ್ಟಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಬೋಲ್ಸ್‌ನಾರೋ , ಮೊದಲಿಂದಲೂ ಕೊರೋನಾ ಸೋಂಕು ನಿವಾರಣೆ ಬಗ್ಗೆ ತೀವ್ರ ಕಾಳಜಿ ವಹಿಸದಿರುವುದೇ ಈ ಪರಿಸ್ಥಿತಿಗೆ ಕಾರಣ ಎಂಬ ಟೀಕೆ , ಟಿಪ್ಪಣಿ ಕೇಳಿ ಬರತೊಡಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss