ಮಡಿಕೇರಿ : ಭಾರತೀಯ ಧ್ವಜ ಸಂಹಿತೆಯಲ್ಲಿ ನಿಗದಿಪಡಿಸಿರುವ ನಿರ್ದಿಷ್ಟ ಸಾಮಾಗ್ರಿ ಹಾಗೂ ಅಳತೆಯ ರಾಷ್ಟ್ರ ಧ್ವಜವನ್ನು ಹೊರತುಪಡಿಸಿ ಇತರ ಯಾವುದೇ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವುದು, ಖರೀದಿಸುವುದು, ಉಪಯೋಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ.
ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಧ್ವಜ ಸಂಹಿತೆಯಲ್ಲಿ ನಿಗದಿಪಡಿಸಿರುವ ನಿರ್ದಿಷ್ಟ ತಯಾರಿಕಾ ಸಾಮಾಗ್ರಿಯಿಂದ ತಯಾರಿಸಿದ ಹಾಗೂ ನಿರ್ದಿಷ್ಟ ಅಳತೆಯ ರಾಷ್ಟ್ರಧ್ವಜಗಳನ್ನು ಹೊರತುಪಡಿಸಿ ಯಾವುದೇ ಇತರ ಸಾಮಾಗ್ರಿಗಳಿಂದ ಹಾಗೂ ವಿಭಿನ್ನ ಅಳತೆಯ ರಾಷ್ಟ್ರ ಧ್ವಜಗಳನ್ನು ಮಾಸ್ಕ್ ಮಾದರಿಯಲ್ಲಿ ಹಾಗೂ ಧರಿಸಬಹುದಾದಂತಯ ಉಡುಪುಗಳ ರೀತಿಯಲ್ಲಿ ಮಾರಾಟ ಮಾಡಬಾರದು ಹಾಗೂ ಸಾರ್ವಜನಿಕರು ಅಂತಹ ಧರಿಸಬಹುದಾದ ರಾಷ್ಟ್ರಧ್ವಜಗಳನ್ನು ಯಾವುದೇ ಸಂದರ್ಭದಲ್ಲಿ ಖರೀದಿಸಿ ಉಪಯೋಗಿಸಬಾರದು ಎಂದು ಅವರು ಹೇಳಿದ್ದಾರೆ.