Friday, August 12, 2022

Latest Posts

ರಾಷ್ಟ್ರಪಕ್ಷಿ ನವಿಲಿಗೆ ಧಾನ್ಯ ತಿನಿಸಿದ ಪ್ರಧಾನಿ : ಜನಮನ ಗೆದ್ದ ವೀಡಿಯೋ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಮುಂಜಾನೆಯ ವಾಯುವಿಹಾರದ ವೇಳೆ ರಾಷ್ಟ್ರಪಕ್ಷಿ ನವಿಲುಗಳಿಗೆ ಆಹಾಧಾನ್ಯ ತಿನಿಸುತ್ತಿದ್ದ ಮತ್ತು ನವಿಲು ಮೋದಿಯವರ ಮುಂದೆ ರೆಕ್ಕೆ ಬಿಚ್ಚಿ ಕುಣಿಯುತ್ತಿದ್ದ ವೀಡಿಯೋವೊಂದು ಭಾರೀ ಪ್ರಮಾಣದಲ್ಲಿ ಜನಮೆಚ್ಚುಗೆ ಪಡೆದಿದೆ.ಪ್ರಧಾನಿ ಮೋದಿಯವರ ಪ್ರಕೃತಿಪ್ರೇಮಕ್ಕೆ ಜನ ‘ನಮೋ ’ಎಂದಿದ್ದಾರೆ.
ಪ್ರಧಾನಿ ಮೋದಿಯವರು ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 1.47 ನಿಮಿಷಗಳ ತುಣುಕನ್ನು ಹೊಂದಿರುವ ವೀಡಿಯೋವಂದನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪ್ರಧಾನಿಯವರು ಗಂಡು ಹಾಗೂ ಹೆಣ್ಣು ನವಿಲುಗಳಿಗೆ ಆಹಾರ ತಿನಿಸುವ ದೃಶ್ಯವಿದೆ. ಪ್ರಧಾನಿ ಮೋದಿ ಹಿಡಿದಿದ್ದ ತಟ್ಟೆಯಿಂದ ನವಿಲು ಯಾವುದೇ ಆತಂಕವಿಲ್ಲದೆ ಆಹಾರಧಾನ್ಯ ತಿನ್ನುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಪ್ರಧಾನಿಯವರು ವಾಯುವಿಹಾರ ಹೋಗುತ್ತಿರುವಾಗ ಅವರ ಮುಂದೆಯೇ ಗಂಡುನವಿಲು ಯಾವುದೇ ಭಯವಿಲ್ಲದೆ ಉತ್ಸಾಹದಿಂದ ರೆಕ್ಕೆಬಿಚ್ಚಿ ಕುಣಿಯುವ ದೃಶ್ಯ ಮನಸೂರೆಗೊಳ್ಳುವಂತಿದೆ.
೭, ಲೋಕಕಲ್ಯಾಣ್ ಮಾರ್ಗ ನಿವಾಸದಿಂದ ಬಂದಿರುವ ಈ ವೀಡಿಯೋದಲ್ಲಿ ಪ್ರಧಾನಿಯವರು ತಮ್ಮ 4.5ಕೋಟಿ ಅನುಯಾಯಿಗಳ ಜೊತೆ ಈ ದೃಶ್ಯವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಜನರು ಈ ವೀಡಿಯೋವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss