Friday, July 1, 2022

Latest Posts

ರಾಷ್ಟ್ರೀಯ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಕೊಡಗಿನ ಅರುಣ್ ಮಾಚಯ್ಯ ಆಯ್ಕೆ

ಮಡಿಕೇರಿ: ರಾಷ್ಟ್ರೀಯ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಕೊಡಗಿನ ಸಿ.ಎಸ್.ಅರುಣ್ ಮಾಚಯ್ಯ ಆಯ್ಕೆಯಾಗಿದ್ದಾರೆ.

ಕೇರಳ ಮತ್ತು ಹರ್ಯಾಣ ಹೈಕೋರ್ಟ್ ಆದೇಶದಂತೆ, ಭಾರತ ಸರ್ಕಾರ ಕ್ರೀಡಾ ಮಂತ್ರಾಲಯ ಮತ್ತು ಇಂಡಿಯನ್ ಒಲಪಿಂಕ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಅಸ್ಸಾಂ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ. ಪಿ. ಬೋರ್ಕೋಟಗಿ ಅವರ ಸಮ್ಮುಖದಲ್ಲಿ ಅಸ್ಸಾಂ ರಾಜ್ಯದ ಗೌಹಟಿಯಲ್ಲಿ ನಡೆದ ಕರಾಟೆ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕರಾಟೆ ಪಟು ಅರುಣ್ ಮಾಚಯ್ಯ ಅವರನ್ನು ಆಯ್ಕೆ ಮಾಡಲಾಯಿತು.

1977ರಲ್ಲಿ ಪ್ರಥಮ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿರುವ ಅರುಣ್ ಮಾಚಯ್ಯ ಅವರು ಕರಾಟೆಯಲ್ಲಿ ಉನ್ನತ ತರಬೇತಿಯನ್ನು ಸಿಂಗಾಪುರ್‍ನಲ್ಲಿ ಮುಗಿಸಿದರು.

ನಂತರದ ವರ್ಷಗಳಲ್ಲಿ ಇಂಡೋನೇಷ್ಯಾ ಮಲೇಷಿಯಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಮೆಕ್ಸಿಕೋ, ನೇಪಾಳ ಹೀಗೆ ಹಲವು ವಿಶ್ವ ಮತ್ತು ಏಷ್ಯಾನ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 1989 ಹಾಗೂ 1993ರಲ್ಲಿ ಹೆವಿ ವೈಟ್ ವಿಭಾಗದಲ್ಲಿ ಪದಕಗಳನ್ನು ಗಳಿಸಿದ್ದಾರೆ.

1994ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಇವರು ವಿಶ್ವ ಕರಾಟೆ ಫೆಡರೇಷನ್ (ಡಬ್ಲ್ಯುಕೆಎಫ್)ನ 7ನೇ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದು, ಅಂತಾರಾಷ್ಟ್ರೀಯ ತೀರ್ಪುಗಾರರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss