Sunday, January 17, 2021

Latest Posts

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಆಯ್ಕೆ ಸಮಿತಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಸರ್ದಾರ್ ಸಿಂಗ್ ಸೇರ್ಪಡೆ

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿಜೇತರ ಆಯ್ಕೆ ಸಮಿತಿಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರನ್ನು ಶುಕ್ರವಾರ ಸೇರ್ಪಡೆಗೊಳಿಸಲಾಗಿದೆ.
ಕಳೆದ ವರ್ಷದಂತೆಯೇ ಈ ಬಾರಿಯೂ ಸಚಿವಾಲಯ ಕ್ರೀಡಾಪಟುಗಳ ಮತ್ತು ಕೋಚ್ ಗಳ ಆಯ್ಕೆಗೆ 12 ಸದಸ್ಯರ ಒಂದೇ ಸಮಿತಿಯನ್ನು ಕ್ರೀಡಾ ಸಚಿವಾಲಯ ರಚಿಸಿದ್ದು, ಸುಪ್ರೀಂ ಕೋರ್ಟ್ ನ ನಿವೃತ್ತಿ ನ್ಯಾಯಮೂರ್ತಿ ಮಕುಂದಕಂ ಶರ್ಮ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪ್ಯಾರಾಲಿಂಪಿಕ್ಸ್ ನಲ್ಲಿ ರಜತ ಪದಕ ಗೆದ್ದಿರುವ ದೀಪಾ ಮಲಿಕ್ ಸಹ ಸಮಿತಿಯಲ್ಲಿದ್ದಾರೆ.
ಆಯ್ಕೆ ಸಮಿತಿಯಲ್ಲಿರುವ ಇತರ ಸದಸ್ಯರೆಂದರೆ, ಟೇಬಲ್ ಟೆನಿಸ್ ಪ್ಲೇಯರ್ ಮೊನಾಲಿಸಾ ಬರುವಾ ಮೆಹ್ತಾ, ಬಾಕ್ಸರ್ ವೆಂಕಟೇಶನ್ ದೇವರಾಜನ್, ಕ್ರೀಡಾ ಕಾಮೆಂಟೇಟರ್ ಮನೀಶ್ ಬಟಾವಿಯಾ ಮತ್ತು ಪತ್ರಕರ್ತ ಅಶೋಕ್ ಸಿಂಹ, ನೀರು ಭಾಟಿಯಾ. ಪ್ರತೀ ವರ್ಷ ಆಗಸ್ಟ್ 29ರಂದು ಹಾಕಿ ದಿಗ್ಗಜ ಧ್ಯಾನ್ ಚಂದ್ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳನ್ನು ನೀಡಲಾಗುತ್ತದೆ.
ಈ ಬಾರಿಯೂ ಒಂದೇ ಸಮಿತಿಯ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಸಮಿತಿಗಳು ಹೆಚ್ಚಾದರೆ, ಗೊಂದಲ ಮತ್ತು ಸಮಸ್ಯೆಗಳು ಹೆಚ್ಚಾಗುವುದೇ ಹೊರತು ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯದು ಎಂದು ಕ್ರೀಡಾ ಸಚಿವಾಲಯ ಹೇಳಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!