Sunday, August 14, 2022

Latest Posts

ರಾಷ್ಟ್ರೀಯ ವಿಮಾನದಲ್ಲಿ 1 ಕೋಟಿ ಮಂದಿ ಪ್ರಯಾಣ: ವಿಮಾನಯಾನ ನಿಯಮಗಳಲ್ಲಿ ಸಡಿಲಿಕೆ

ಹೊಸದಿಲ್ಲಿ: ಮೇ 25ರಿಂದ ಭಾರತೀಯ ವಿಮಾನಯಾನ ಸಂಸ್ಥೆ ದೇಶೀಯ ವಿಮಾನಗಳ ಹಾರಾಟ ಪ್ರಾರಂಭಿಸಿದ್ದು, ವಿಮಾನಗಳಲ್ಲಿ ಬರೋಬ್ಬರಿ 1 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೊರೋನಾ ದಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಭಾರತ ವಿಮಾನಯಾನ ಸಂಸ್ಥೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನಗಳು ಸ್ಥಗಿತಗೊಳಿಸಿತ್ತು. ಮೇ ತಿಂಗಳಲ್ಲಿ ಪ್ರಾರಂಭವಾದ ವಂದೇ ಭಾರತ್ ಮಿಷನ್ (ವಿಬಿಎಂ) ವಿಮಾನಯಾನ ಸಚಿವಾಲಯದ ಪ್ರಕಾರ ಸುಮಾರು 18 ಲಕ್ಷ ನಾಗರಿಕರು ಪ್ರಯಾಣ ಮಾಡಿದ್ದಾರೆ.

ಇದೀಗ ವಿಮಾನಯಾನ ಸಂಸ್ಥೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ 4 ರೀತಿಯ ಸಡಿಲಿಕೆಗಳನ್ನು ಮಾಡಿದೆ

ಖಾಸಗಿ ವಿಮಾನಯಾನಕ್ಕೆ ಅವಕಾಶ: ವಂದೇ ಭಾರತ್ ಮಿಷನ್‌ನಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು ವಂದೇ ಭಾರತ್ ಮಿಷನ್ ಯೋಜನೆಯನ್ನು ಏರ್ ಇಂಡಿಯಾ ನೇತೃತ್ವ ವಹಿಸಿತ್ತು. ವಂದೇ ಭಾರತ್ ಮಿಷನ್ ನ ಮೂರನೇ ಹಂತದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಭಾಗವಹಿಸಲು ಕೇಂದ್ರವು ಅವಕಾಶ ನೀಡಿತು. ಅಕ್ಟೋಬರ್‌ನಲ್ಲಿ 7ನೇ ಹಂತ ಯೋಜನೆ ಪ್ರಾರಂಭವಾಗಲಿದೆ.

ಸಾಮರ್ಥ್ಯ: ದೇಶೀಯ ಪ್ರಯಾಣಿಕರ ವಿಮಾನಗಳು ಈಗ ಕೋವಿಡ್ ನಿಂದ ಶೇ. 60 ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲು ಅನುಮತಿ ನೀಡಲಾಗಿದೆ. ಮೇ 25 ರಂದು ಪುನರಾರಂಭಗೊಂಡಾಗ, ಶೇ 33ರಷ್ಟು ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿತ್ತು.

ಬ್ಯಾಗೇಜ್ ನಿಯಮಗಳು: ಪ್ರಯಾಣಿಕರಿಗೆ 20 ಕೆ.ಜಿ ವರೆಗಿನ ಒಂದು ಚೆಕ್-ಇನ್ ಬ್ಯಾಗ್‌ನ ಬದಲು ವಿಮಾನಯಾನ ಸಂಸ್ಥೆಗಳಿಗೆ ಈಗ ತಮ್ಮದೇ ಆದ ಚೆಕ್-ಇನ್ ಬ್ಯಾಗೇಜ್ ನೀತಿಗಳನ್ನು ಜಾರಿಗೆ ತರಲು ಅನುಮತಿ ನೀಡಲಾಗಿದೆ.

ಊಟದ ವ್ಯವಸ್ಥೆ: ಆರಂಭಿಕ ತಿಂಗಳುಗಳಲ್ಲಿ ದೇಶೀಯ ವಿಮಾನಗಳಲ್ಲಿ ಯಾವುದೇ ಊಟಕ್ಕೆ ಅವಕಾಶವಿರಲಿಲ್ಲ. ಅಂತರರಾಷ್ಟ್ರೀಯ ವಿಮಾನಗಳಿಗೆ ತಿಂಡಿಗಳು, ಮೊದಲೇ ಪ್ಯಾಕ್ ಮಾಡಿದ ಆಹಾರ ನೀಡಲಾಗುತ್ತಿತ್ತು. ದೇಶೀಯ ವಿಮಾನಗಳಲ್ಲಿ ಪಾನೀಯಗಳು ಬಿಸಿ ಊಟ ನೀಡಲು ಅವಕಾಶ ನೀಡಲಾಗಿರಲಿಲ್ಲ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss