spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿದ್ದ ಅಕ್ರಮ ಅಂಗಡಿ, ಹೊಟೇಲ್, ತರಕಾರಿ ಅಂಗಡಿಗಳ ತೆರವು

- Advertisement -Nitte

ಮೈಸೂರು: ದಕ್ಷಿಣ ಕಾಶಿ ಎಂದು ಹೆಸರಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಕೋನ ರಸ್ತೆಯಾದ ನಂಜನಗೂಡು-ಗುoಡ್ಲುಪೇಟೆ- ಮೈಸೂರು ರಸ್ತೆಯ ಎರಡು ಬದಿಗಳಲ್ಲಿ ಅನಧಿಕೃತವಾಗಿ ಅಕ್ರಮಿಸಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ದೇವಸ್ಥಾನ, ನೂರಾರು ಅಂಗಡಿ ಶೆಡ್, ಟೀ ಅಂಗಡಿಗಳು, ತರಕಾರಿ ಅಂಗಡಿಗಳು, ಮೀನು ಮಾರಾಟ ಮಳಿಗೆಗಳನ್ನು ತಹಸಿಲ್ಧಾರ್ ಕೆ.ಎಂ,ಮಹೇಶ್‌ಕುಮಾರರವರ ಸಮ್ಮುಖದಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ನಂಜನಗೂಡು ತಾಲ್ಲೂಕು ಕಚೇರಿಯಿಂದ ಆರಂಭವಾದ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ೨ ಜೆಸಿಬಿ, ನಾಲ್ಕು ಟಿಪ್ಪರ್, ನಗರಸಭಾ ಸಿಬ್ಬಂದ್ದಿಗಳು ರಾಷ್ಟ್ರೀಯ ಹೆದ್ದಾರಿ ಕಾನೂನು ಮೀರಿ ರಸ್ತೆಗೆ ಆಕ್ರಮಿಸಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸಿ, ಅಲ್ಲಿದ್ದ ಶೀಟ್, ಕಬ್ಬಿಣದ ಸಾಮಾಗ್ರಿಗಳನ್ನು ಟಿಪ್ಪರ ಮೂಲಕ ನಗರಸಭೆಯ ಆವರಣಕ್ಕೆ ಸಾಗಿಸಲಾಯಿತು.

ನಗರಸಭಾ ಆಯುಕ್ತ ಕರಿಬಸವಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಫೆಬ್ರವರಿ ತಿಂಗಳಲ್ಲೆ ತೆರವುಗೊಳಿಸಬೇಕಾಗಿತ್ತು. ಆದರೆ ಕೋವಿಡ್ ಸೋಂಕು ಹರಡಿದ ಕಾರಣ ವಿಳಂಬವಾಯಿತು. ವಾಹನ ಸಂಚಾರಕ್ಕೆ ಈ ಅಂಗಡಿಗಳಿoದ ತೊಂದರೆ ಆಗುವುದಲ್ಲದೇ ಅಪಘಾತಕ್ಕೆ ಕಾರಣವಾಗಿತ್ತು. ತಹಸಿಲ್ಧಾರ್ ಕೆ.ಎಂ. ಮಹೇಶ್‌ಕುಮಾರ್ ಮಾರ್ಗಧರ್ಶನದಲ್ಲಿ ಈ ಕಾರ್ಯಚರಣೆ ಮಾಡಿದ್ದೇವೆ. ನಾವೇನು ಏಕಾಏಕಿ ಕಾರ್ಯಾಚರಣೆ ಮಾಡಿ, ಯಾರಿಗೂ ತೊಂದರೆ ನೀಡಿಲ್ಲಾ, ಕಳೆದ ಮೂರು ದಿನಗಳಿಂದ ಧ್ವನಿವರ್ಧಕ ಮೂಲಕ ಅಂಗಡಿಯವರಿಗೆ ಎಚ್ಚರಿಕೆ ನೀಡಲಾಗಿತ್ತು. ಹೆದ್ದಾರಿ ಜಾಗದಲ್ಲಿ ಕೆಲವು ಬೈಕ್‌ಗಳ ಶೋ ರೂಂ ಮಾಲೀಕರು, ಆಕ್ರಮಿಸಿಕೊಂಡಿದ್ದು, ಅವರಿಗೂ ಎಚ್ಚರಿಕೆ ನೀಡಲಾಗಿದೆ. ಮತ್ತೆ ತೆರವುಗೊಳಿಸಿದ ಸ್ಥಳದಲ್ಲಿ ಶೆಡ್‌ಗಳನ್ನು ನಿರ್ಮಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಂದಿನ ಕಾರ್ಯಾಚರಣೆಯಲ್ಲಿ ಸಿಪಿಐ ಲಕ್ಷಿö್ಮಕಾಂತ್ ತಳವಾರ್, ಪಿಎಸೈಗಳಾದ ರವಿಕುಮಾರ್, ಜಯಲಕ್ಷಿö್ಮ, ರೆವಿನ್ಯೂ ಅಧಿಕಾರಿ ಪ್ರಕಾಶ್, ನಗರಸಭೆ ಎಇಇ ಆರ್,ಶ್ರೀನಿವಾಸ್, ವ್ಯವಸ್ಥಾಪಕ ಹೇಮಂತ್ ಕುಮಾರ್, ಆರ್.ಐ, ರಾಣಿ, ಪರಿಸರ ಅಭಿಯಂತರಾದ ಅರ್ಚನಾ ಆರಾಧ್ಯ, ಯೋಜನಾಧಿಕಾರಿ ಶ್ರೀನಿವಾಸ್, ಸರ್ವೆ ಅಧಿಕಾರಿ ಮಹಾಲಿಂಗಯ್ಯ, ಗ್ರಾಮ ಲೆಕ್ಕಿಗ ವಿರೇಶ್, ಇಂಜಿನಿಯರ್ ಕುಮಾರ್, ಲೊಕೇಶ್, ಆರೋಗ್ಯ ನಿರೀಕ್ಷಕರಾದ ವಸಂತ್, ಆಶೋಕ್, ಸುಷ್ಮಾ, ಪಲ್ಲವಿ, ಇದ್ದರು.

ಅಂಗಡಿ ಮಾಲೀಕರ ಅಸಮಾಧಾನ; ತರಕಾರಿ, ಟೀ, ಕ್ಯಾಂಟೀನ್, ಪಾನೀಪುರಿ, ತಿಂಡಿ ತಿನಿಸುಗಳನ್ನು ಜೀವನ ಸಾಗಿಸುತ್ತಿದ್ದ ಅನೇಕ ವ್ಯಾಪಾರಸ್ಥರು ಮಾತನಾಡಿ, ಉಳ್ಳವರಿಗೊಂದು ಬಡವರಿಗೊಂದು ನ್ಯಾಯ ಮಾಡಬೇಡಿ, ಎಲ್ಲವೂ ತೆರವುಗೊಳ್ಳಲೇ ಬೇಕು, ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾವಿರಾರು ಪೆಟ್ಟಿಗೆ ಅಂಗಡಿಗಳು ಸೇರಿದಂತೆ ಹಲವಾರು ಅಂಗಡಿಗಳು ನಡೆಸುತ್ತಿದ್ದು, ಅವುಗಳನ್ನು ತೆರವುಗೊಳಿಸಿ ಎಲ್ಲರಿಗೂ ಒಂದೆ ಜಾಗದಲ್ಲಿ ವ್ಯಾಪಾರ ಮಾಡಲು ಶಾಸಕರು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss