Monday, July 4, 2022

Latest Posts

ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ರಾಷ್ಟ್ರೀಯತೆಯ ಪಾತ್ರ ಮೌಲ್ಯಯುತ: ಪ್ರೊ.ಎಸ್.ಸಿ. ಶರ್ಮಾ

ಬೆಳಗಾವಿ : ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ರಾಷ್ಟ್ರೀಯವಾದ ಅಥವಾ ರಾಷ್ಟ್ರೀಯತೆಯ ಪಾತ್ರ ಪ್ರಮುಖ ಪಾತ್ರ ವಹಿಸಲಿದೆ ಎಂದು  ಬೆಂಗಳೂರಿನ ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಹೇಳಿದರು.
ಅವರು ಸೋಮವಾರ ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವರ್ಚುವಲ್ ಮೂಲಕವೇ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿ,
ನವ ಪದವೀಧರರು ದೇಶದ ಪ್ರಗತಿಯ ಚಕ್ರಗಳಿದ್ದಂತೆ. ಆದ್ದರಿಂದ ಎಲ್ಲರೂ ಭಾರತೀಯತೆಯನ್ನು ಮೈಗೂಡಿಸಿಕೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವಂತೆ ಜ್ಞಾನವನ್ನು ಮಾತೃಸ್ಥಾನಕ್ಕೆ ಹೋಲಿಕೆ ಮಾಡಲಾಗಿದ್ದು, ಅನಾದಿ ಕಾಲದಿಂದಲೂ ಶಿಕ್ಷಣಕ್ಕೆ ನೀಡಲಾಗಿರುವ ಮಹತ್ವವನ್ನು ಇದು ತೋರಿಸುತ್ತದೆ.
ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ರಾಣಿ ಚನ್ನಮ್ಮ ಅವರನ್ನು ಸ್ಮರಿಸಿದ ಅವರು, ಮಹಾತ್ಮರು ಎಂದಿಗೂ ಅಜರಾಮರರಾಗಿರುತ್ತಾರೆ ಎಂದು ಡಾ. ಎಸ್.ಸಿ ಶರ್ಮಾ ತಿಳಿಸಿದರು.
ವಿಶ್ವವಿದ್ಯಾಲಯಕ್ಕೆ ಮೂರು ಚಿನ್ನದ ಪದಕ ಪಡೆದುಕೊಂಡು ಪ್ರಥಮ ರ್ಯಾಂಕ್ ಗಳಿಸಿದ
ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪಾರ್ವತಿ ಪಾಟೀಲ ರಾಜ್ಯಪಾಲರು ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಪದಕಗಳನ್ನು ವಿತರಿಸಿದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀಗಳಿಗೆ, ಬೆಂಗಳೂರಿನ ಕೆ. ಗೋವಿಂದರಾಜ ಅವರಿಗೆ ಹಾಗೂ ಮೋಹನದಾಸ ಪೈ ಅವರ ಅನುಪಸ್ಥಿತಿಯಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಡಾಕ್ಟರ್ ಆಫ್ ಲೆಟರ್ಸ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಆರ್.ಸಿ.ಯು ಕುಲಪತಿ ಪ್ರೊ. ರಾಮಚಂದ್ರ ಗೌಡ,
ಕುಲಸಚಿವರು ಡಾ. ಬಸವರಾಜ ಪದ್ಮಸಾಲಿ, ಮೌಲ್ಯಮಾಪನ ಕುಲಸಚಿವರು ಡಾ. ಎಂ.ಎಸ್.ಹುರಕಡ್ಲಿ, ಹಣಕಾಸು ಅಧಿಕಾರಿ ಡಾ. ಡಿ.ಎನ್‌.ಪಾಟೀಲ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss