Sunday, June 26, 2022

Latest Posts

ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಪೆರೇಡ್‍ಗೆ ಕೊಡಗಿನ ಇಬ್ಬರು ಕೆಡೆಟ್‍ಗಳು ಆಯ್ಕೆ

ಹೊಸದಿಗಂತ ವರದಿ, ಮಡಿಕೇರಿ:
ಮುಂದಿನ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಪಥಸಂಚನದಲ್ಲಿ ಪಾಲ್ಗೊಳ್ಳಲು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇಬ್ಬರು ಕೆಡೆಟ್‍ಗಳು ಆಯ್ಕೆಯಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಇಂದ್ರಜಿತ್ ಎಂ.ಎಸ್ ಮತ್ತು ಯಶಸ್ವಿ ಸಿ.ಟಿ ಅವರು ಕೊಡಗು ಜಿಲ್ಲೆಯ ಎನ್‍ಸಿಸಿ ಸೀನಿಯರ್ ವಿಭಾಗದಿಂದ ಕಾಲೇಜಿನ ಎನ್‍ಸಿಸಿ ಅಧಿಕಾರಿ ಮೇಜರ್ ಡಾ.ರಾಘವ್ ಬಿ. ಹಾಗೂ 19ನೇ ಕರ್ನಾಟಕ ಬೆಟಾಲಿಯನ್‍ನ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಇವರು ಕರ್ನಾಟಕ-ಗೋವಾ ಡೈರೆಕ್ಟರೇಟ್‍ನ್ನು ಪ್ರತಿನಿಧಿಸಿದ 26 ಕೆಡೆಟ್‍ಗಳ ಪೈಕಿ ಕೇವಲ ಇಬ್ಬರಾಗಿದ್ದು, ಕೊಡಗಿನ ಕೀರ್ತಿ ಹೆಚ್ಚಿಸಿದ್ದಾರೆ.
ದ್ವಿತೀಯ ಬಿಬಿಎ ವಿದ್ಯಾರ್ಥಿಯಾದ ಇಂದ್ರಜಿತ್ ಎಂ.ಎಸ್ ಇವರು ತಾಳತ್‍ಮನೆಯ ನಿವಾಸಿ ಸುಬ್ರಮಣಿ.ಎಂ.ಜಿ ಮತ್ತು ಸುಜಾತ ಎಂ.ಎಸ್ ಅವರ ಪುತ್ರರಾಗಿದ್ದಾರೆ. ದ್ವಿತೀಯ ಬಿಎಸ್‍ಸಿಯ ಯಶಸ್ವಿ ಸಿ.ಟಿ ಇವರು ಪಾರಾಣೆ ಕೊಣಂಜಗೇರಿ ನಿವಾಸಿಗಳಾದ ಚೌವ್ವಂಡ ಮನು ತಮ್ಮಯ್ಯ ಮತ್ತು ಸಮಿತಾ ಅವರ ಪುತ್ರಿಯಾಗಿದ್ದಾರೆ.
ಹಲವು ವರ್ಷಗಳಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಿಂದ ನಿರಂತರವಾಗಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕೆಡೆಟ್‍ಗಳು ಆಯ್ಕೆಯಾಗುತ್ತಿರುವುದಲ್ಲದೆ, ಸೇನೆಯ ಉನ್ನತ ಹುದ್ದೆಗಳನ್ನೊಳಗೊಂಡು, ವಿವಿಧ ಸ್ಥಾನಗಳಿಗೆ ಆಯ್ಕೆಯಾಗುತ್ತಿರುವುದಕ್ಕೆ ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಇಬ್ಬರು ಕೆಡೆಟ್‍ಗಳು ಅದರ ಸರದಿಯಲ್ಲಿರುವುದಕ್ಕೆ ಕಾಲೇಜಿನ ಎಲ್ಲರ ಪರವಾಗಿ ಪ್ರಾಂಶುಪಾಲ ಡಾ.ಚೌರೀರ ಜಗತ್ ತಿಮ್ಮಯ್ಯ ಅವರು ಅಭಿನಂದಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss