ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ದಿನೇ ದಿನೇ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಇಂದು 2 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ದೆಹಲಿಯ ಸಫ್ದರ್ಜುಂಗ್ನಲ್ಲಿ ಇಂದು 2 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಪಲಂನಲ್ಲಿ 4.9 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಕನಿಷ್ಠ ಉಷ್ಣಾಂಶ ಜೊತೆಗೆ ದೆಹಲಿಯಲ್ಲಿ ವಾಯುಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಇಡೀ ದಿನ ಮಂಜುಕವಿದ ವಾತಾವರಣದಿಂದ ಕೂಡಿದೆ. ಇನ್ನು ಚಳಿಗಾಲ ಶುರುವಾಗುವ ಮುನ್ನವೇ ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾಗಿದ್ದು, ಇತ್ತ ಕೊರೋನಾ ಹಾಗೂ ವಾಯು ಮಾಲಿನ್ಯದಿಂದಾಗಿ ಚಳಿಗಾಲದಲ್ಲಿ ಉರಿರಾಟದ ತೊಂದರೆಗಳು, ಹೃದಯಾಘಾತ ಹೆಚ್ಚಾಗಿದೆ.
ಇನ್ನು ದೆಹಲಿ ಮಾತ್ರವಲ್ಲದೇ ಆಸುಪಾಸಿನ ರಾಜ್ಯಗಳಾದ ಹರ್ಯಾಣ, ಪಂಜಾಬ್ ನಲ್ಲೂ ಚಳಿ ಮುಂದುವರೆದಿದ್ದು, ಹರ್ಯಾಣದಲ್ಲಿ 1.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.