Monday, August 15, 2022

Latest Posts

ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ದರ 8 ರೂಪಾಯಿ ಇಳಿಕೆ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಲೀಟರ್ ಮೇಲೆ ಒಂದೇ ಸಲ 8 ರೂಪಾಯಿ ಇಳಿಕೆಯಾಗಿದೆ. ಡೀಸೆಲ್ ಮೇಲೆ ವಿಧಿಸಿದ್ದ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್)ಯನ್ನು ಶೇ. 30ರಿಂದ ಶೇ. 16.75ಕ್ಕೆ ರಾಜ್ಯ ಸರ್ಕಾರ ಇಳಿಕೆ ಮಾಡಿದೆ. ಪರಿಣಾಮ, ಪ್ರತಿ ಲೀಟರ್ ಡೀಸೆಲ್ ದರ 8.36 ರೂಪಾಯಿಯಷ್ಟು ಇಳಿಕೆಯಾಗಿದೆ.
ಬುಧವಾರ ಡೀಸೆಲ್ ಬೆಲೆ 81.94 ರೂಪಾಯಿಯಷ್ಟಾಗಿತ್ತು. ಪೆಟ್ರೋಲ್​ಗಿಂತ ದುಬಾರಿ ಬೆಲೆಯಲ್ಲಿ ಡೀಸೆಲ್ ಮಾರಾಟವಾಗುತ್ತಿತ್ತು. ಈಗ ಡೀಸೆಲ್ ದರ 73.64 ರೂಪಾಯಿಗೆ ಇಳಿಕೆಯಾಗಿದೆ.,

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss