Tuesday, August 16, 2022

Latest Posts

ರಾಷ್ಟ್ರ ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣ: ವಿಮಾನ ಹಾರಾಟಕ್ಕೂ ತೊಡಕು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ರನ್’ವೇ ಕಾಣಿಸದಷ್ಟು ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದರಿಂದ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ, ಮತ್ತು ಅಲ್ಲಿಂದ ಹೊರಡಬೇಕಿದ್ದ ವಿಮಾನಗಳ ಹಾರಟಕ್ಕೆ ತೊಡಕಾಗಿದೆ. ಕೆಲವು ವಿಮಾನಗಳ ಸಂಚಾರಕ್ಕೆ ತೊಂದರೆಯಾದರೆ ಇನ್ನೂ ಕೆಲವು ವಿಮಾನಗಳ ಹಾರಾಟವನ್ನೇ ಸ್ಥಗಿತ ಮಾಡಲಾಗಿದೆ.

ದೆಹಲಿಯ ಕೆಲವು ಪ್ರದೇಶಗಳಲ್ಲಿ ಮಂಜು ಆವರಿಸಿದ್ದು, ವಾಹನ ಸವಾರರು ಕೂಡ ಪರದಾಡುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss