Wednesday, August 17, 2022

Latest Posts

ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ: ಇತ್ತ ಬೆಂಬಲ ಬೆಲೆಯಲ್ಲಿ 521ಲಕ್ಷ ಟನ್ ಭತ್ತ ಖರೀದಿಸಿದ ಕೇಂದ್ರ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಸರ್ಕಾರ ಎಂಎಸ್​ಪಿ ಭರವಸೆಯಡಿ ಖರೀದಿ ಪ್ರಕ್ರಿಯೆ ಮುಂದುವರಿಸಿದೆ.
ಕೇಂದ್ರ ಸರಕಾರ ಖಾರಿಫ್ ಮಾರುಕಟ್ಟೆ ಅವಧಿಯಲ್ಲಿ ಎಂಎಸ್‌ಪಿಯಡಿ ಸುಮಾರು 68 ಲಕ್ಷ ರೈತರಿಂದ 98,457 ಕೋಟಿ ರೂ. ವೆಚ್ಚದಲ್ಲಿ ಈವರೆಗೆ 521.48 ಲಕ್ಷ ಟನ್ ಭತ್ತ ಸಂಗ್ರಹಿಸಿದೆ.
2020-21ರಲ್ಲಿ ಸರ್ಕಾರವು ಈಗಿನ ಎಂಎಸ್​ಸಿ ಯೋಜನೆಗಳ ಪ್ರಕಾರ ರೈತರಿಂದ ಖಾರಿಫ್ ಬೆಳೆಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 6ರವರೆಗೆ 521.48 ಲಕ್ಷ ಟನ್ ಭತ್ತದ ಸಂಗ್ರಹವಾಗಿದ್ದು, ಇದು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇ 27.13ರಷ್ಟು ಹೆಚ್ಚಾಗಿದೆ
ಖಾರಿಫ್ ಮಾರುಕಟ್ಟೆ ಋತುಮಾನವು ಅಕ್ಟೋಬರ್‌ನಿಂದ ಪ್ರಾರಂಭವಾಗುತ್ತದೆ. ಸುಮಾರು 67.89 ಲಕ್ಷ ರೈತರು ಈಗಾಗಲೇ ಕೆಎಂಎಸ್ ಖರೀದಿಯಿಂದ ಎಂಎಸ್​ಪಿಯಡಿ 98,456.80 ಕೋಟಿ ರೂ. ಪಡೆದಿದ್ದಾರೆ ಎಂದಿದೆ.
ಒಟ್ಟು 521.48 ಲಕ್ಷ ಟನ್ ಖರೀದಿಯ ಪೈಕಿ ಪಂಜಾಬ್ 202.77 ಲಕ್ಷ ಟನ್ ಕೊಡುಗೆ ನೀಡಿದೆ. ಜನವರಿ 6 ರವರೆಗೆ 23,485.05 ಕೋಟಿ ರೂ. ಮೌಲ್ಯದ 80,26,401 ಹತ್ತಿ ಬೇಲ್​ಗಳನ್ನು 15,59,429 ರೈತರಿಂದ ಸಂಗ್ರಹಿಸಲಾಗಿದೆ ಎಂದು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!