Monday, July 4, 2022

Latest Posts

ರಾಹುಲ್ ಗಾಂಧಿಗೆ ಲಡಾಖ್ ಎಂಪಿ ಚಾಟಿ| ಚೀನಾ ಭಾರತದ 37,244 ಚ.ಕಿ.ಮೀ .ಭೂಮಿ ಕಬಳಿಸಿದ್ದು ನಿಜ, ಆದರೆ ಕಾಂಗ್ರೆಸ್ ಅವಧಿಯಲ್ಲಿ !

ಹೊಸದಿಲ್ಲಿ: ಲಡಾಖ್‌ನಲ್ಲಿ ಚೀನೀ ಪಡೆಗಳು ಅತಿಕ್ರಮಣ ಮಾಡಿ ಭಾರತದ ನೆಲವನ್ನು ಕಬಳಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದಕ್ಕೆ ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಖಡಕ್ ಉತ್ತರ ನೀಡಿದ್ದಾರೆ. ಚೀನಾ ಭಾರತದ ಭೂಮಿಯನ್ನು ಕಬಳಿಸಿದ್ದು ನಿಜ, ಆದರೆ ಅದು ಈಗ ಮಾತ್ರ ಅಲ್ಲ, ೧೯೬೨ರಲ್ಲಿ ಎಂಬುದಾಗಿ ಅವರು ರಾಹುಲ್ ಗಾಂಧಿಗೆ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟು ನೀಡಿದ್ದಾರೆ .
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ನಮ್ಮ ನೆಲ ಸುರಕ್ಷಿತವಾಗಿದೆ. ಲಡಾಖ್‌ನ ಒಂದು ಇಂಚು ಭೂಮಿಯೂ ಚೀನಾದ ಪಾಲಾಗಿಲ್ಲ. ಆದರೆ ಚೀನಾ ಪಡೆಗಳು ಭಾರತದ ಭೂಮಿಯನ್ನು ಕಬಳಿಸಿರುವುದು ನಿಜ, ಆದರೆ ಅದು ಈಗಲ್ಲ, ೧೯೬೨ರಲ್ಲಿ .ಆಗ ಕಾಂಗ್ರೆಸ್ ಆಡಳಿತಾವಯಲ್ಲಿ ಚೀನಾ ಭಾರತದ ೩೭,೨೪೪ಚ.ಕಿ.ಮೀ.ನಷ್ಟು ಭೂಮಿಯನ್ನು ಕಬಳಿಸಿತ್ತು . ಆದರೆ ರಾಹುಲ್ ಗಾಂ ಮಾತ್ರ ಈಗ ಜನರ ದಾರಿ ತಪ್ಪಿಸುವ ಕೆಲ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಅವಯಲ್ಲಿ ನಮ್ಮ ಭೂಮಿಯನ್ನು ಚೀನಾ ಕಬಳಿಸಿರುವ ಬಗ್ಗೆ ಅವರು ಟ್ವಿಟರ್‌ನಲ್ಲಿ ಚಿತ್ರ ಸಹಿತ ಮಾಹಿತಿ ನೀಡಿದ್ದಾರೆ .
ಅಲ್ಲದೆ , ವಾಸ್ತವಾಂಶಗಳಿಂದ ಕೂಡಿದ ನನ್ನ ಈ ಉತ್ತರವನ್ನು ರಾಹುಲ್ ಮತ್ತು ಕಾಂಗ್ರೆಸ್ ಒಪ್ಪಿಕೊಳ್ಳಬಹುದೆಂಬ ವಿಶ್ವಾಸ ನನ್ನದು. ಮತ್ತೆ ಜನರನ್ನು ದಾರಿತಪ್ಪಿಸಲು ಅವರು ಮುಂದಾಗದಿರಲೆಂದೂ ನಮ್ಗ್ಯಾಲ್ ಆಗ್ರಹಿಸಿದ್ದಾರೆ.
ಕೊರೋನಾ ಬಿಕ್ಕಟ್ಟಿನಲ್ಲಿ ದೇಶ ಸಿಲುಕಿರುವಾಗ ,ಆರಂಭದಲ್ಲಿ ಲಾಕ್‌ಡೌನ್‌ನ್ನು ವಿರೋಸಿದ್ದ ರಾಹುಲ್ ಗಾಂಧಿ, ಅನಂತರ ಲಾಕ್‌ಡೌನ್ ಸಡಿಲಿಕೆಯನ್ನು ಟೀಕಿಸಿದ್ದರು. ವಲಸಿಗ ಕಾರ್ಮಿಕರಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನೂ ನೀಡಿದ್ದರಲ್ಲದೆ ಇದೀಗ ಲಡಾಖ್‌ನಲ್ಲಿ ಚೀನಾ ಸೃಷ್ಟಿಸಿರುವ ಉದ್ವಿಗ್ನತೆಯನ್ನು ಮುಂದಿಟ್ಟುಕೊಂಡು ಕೇಂದ್ರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದೇಶದ ಸುರಕ್ಷಾ ವಿಚಾರವೂ ರಾಹುಲ್‌ಗೆ ರಾಜಕೀಯ ಕೆಸರೆರಚಾಟದ ವಿಷಯವಾಗಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss