ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಏರಿಕೆ ಕಾಣುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ತಮ್ಮ ಎಲ್ಲಾ ಱಲಿಗಳನ್ನು ಕ್ಯಾನ್ಸಲ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇತರೆ ರಾಜಕೀಯ ಪಕ್ಷಗಳೂ ಸಹ ಱಲಿಯಿಂದಾಗಿ ಜನರ ಮೇಲೆ ಎಂಥ ಕೆಟ್ಟ ಪರಿಣಾಮ ಬೀರಲಿದೆ ಎಂದು ಚಿಂತಿಸಬೇಕು ಎಂದಿದ್ದಾರೆ.
ಆದರೆ ರಾಹುಲ್ ಗಾಂಧಿ ಮಾತನ್ನು ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಕೇಳದಂತಾಗಿದ್ದಾರೆ. ಹೌದು, ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಟ್ವಿಟರ್ನಲ್ಲಿ ತಾವು ನಡೆಸಿದ ಬಹಿರಂಗ ಸಮಾವೇಶದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಪಕ್ಷದ ನಾಯಕನ ನಿರ್ಧಾರಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಮಾಲ್ಡಾ ಬಳಿ ನಡೆದ ಸಭೆಯ ಫೋಟೋಗಳನ್ನು ಅಧೀರ್ ರಂಜನ್ ಚೌಧರಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
মালদা বিধানসভা কেন্দ্রের জোট সমর্থিত কংগ্রেসের প্রার্থী ভূপেন্দ্রনাথ হালদারের সমর্থনে আজ মালদাতে এক সভায় pic.twitter.com/EhjINOgNWD
— Adhir Chowdhury (@adhirrcinc) April 18, 2021