Tuesday, July 5, 2022

Latest Posts

ರಾಹುಲ್ ತ್ರಿಪಾಠಿ ಏಕಾಂಗಿ ಹೋರಾಟ: ಸಿಎಸ್​ಕೆಗೆ 167 ರನ್ ಗುರಿ

ಅಬುಧಾಬಿ: ರಾಹುಲ್ ತ್ರಿಪಾಠಿ ಅವರ ಆಕರ್ಷಕ ಅರ್ಧಶತಕ(81)ದ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ
ಸಿಎಸ್​ಕೆಗೆ 167 ರನ್​ ಗುರಿ ನೀಡಿದೆ.
ಟಾಸ್​ಗೆದ್ದ ಕೆಕೆಆರ್ ತಂಡದ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಳೆದ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್ ಇಂದಿನ ಪಂದ್ಯದಲ್ಲಿ ನರೈನ್​ ಬದಲಾಗಿ ಆರಂಭಿಕನಾಗಿ ಕಣಕ್ಕಿಳಿದು ಆಕರ್ಷಕ ಅರ್ಧಶತಕ ಸಿಡಿಸಿದರು. ಅವರು ಗಿಲ್ ಜೊತೆಗೆ ಮೊದಲ ವಿಕೆಟ್​ ಜೊತೆಯಾಟದಲ್ಲಿ 37 ರನ್​ ಕಲೆ ಹಾಕಿದರು. ಗಿಲ್​ ಕೇವಲ 11 ರನ್​ಗಳಿಸಿ ಠಾಕೂರ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಯಾವ ಬ್ಯಾಟ್ಸ್​ಮನ್​ಗಳು ಕ್ರೀಸ್​ನಲ್ಲಿ ಹೆಚ್ಚು ನೆಲೆಯೂರಲು ಸಿಎಸ್​ಕೆ ಬೌಲರ್​ಗಳು ಅವಕಾಶ ನೀಡಲಿಲ್ಲ. ಗಿಲ್​ ನಂತರ ಬಂದ ನಿತೀಶ್ ರಾಣಾ 9, ನರೈನ್ 17, ಮಾರ್ಗನ್ 7, ರಸೆಲ್​ 2 ಹಾಗೂ ಕಾರ್ತಿಕ್​ ಕೇವಲ 12 , ಶಿವಮ್ ಮಾವಿ ಹಾಗೂ ನಾಗರಕೋಟಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಪ್ಯಾಟ್​ ಕಮ್ಮಿನ್ಸ್​ 9 ಎಸೆತಗಳಲ್ಲಿ 17 ರನ್​ಗಳಿಸಿ ಔಟಾಗದೆ ಉಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss