Saturday, August 13, 2022

Latest Posts

ರಾಹುಲ್ ಮಾತು ಕೇಳಿ ಕಾಂಗ್ರೆಸ್ ನಾಯಕರೇ ನಗುತ್ತಿದ್ದಾರೆ: ತೋಮರ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದಿಲ್ಲಿ ರೈತ ಪ್ರತಿಭಟನೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿಷಕಾರುವ ಹೇಳಿಕೆಗಳನ್ನು ನೀಡುತ್ತಿರುವಂತೆಯೇ, ರಾಹುಲ್ ಹೇಳಿಕೆಗಳಿಗೆ ಕಾಂಗ್ರೆಸ್ ಪಕ್ಷದ ನಾಯಕರೇ ನಗುತ್ತಿದ್ದಾರೆ ಎಂಬುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೇವಡಿಗೈದಿದ್ದಾರೆ.೨೦೧೯ರ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಈ ಕೃಷಿ ಕಾನೂನುಗಳ ಬಗ್ಗೆ ಹೇಳಲಾಗಿದೆ.ಈಗ ಸೋನಿಯಾ ಗಾಂ ಮತ್ತು ರಾಹುಲ್ ಅವರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಆ ಭರವಸೆಗಳನ್ನು ರೈತರನ್ನು ವಂಚಿಸಲು ಹೇಳಲಾಗಿತ್ತೇ ಎಂಬ ಬಗ್ಗೆ ಸ್ಪಷ್ಟಪಡಿಸಬೇಕಾಗಿದೆ ಎಂದು ತೋಮರ್ ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇಂತಹ ಕೃಷಿ ಕಾನೂನು ಜಾರಿಗೆ ತರುವ ಬಗ್ಗೆ ಸ್ಪಷ್ಟ ಭರವಸೆ ನೀಡಿದ್ದು, ಈಗ ರಾಹುಲ್ ಅದಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವುದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರಧಾನಿ ಮೋದಿ ರೈತರಿಗೆ ಗೌರವ ನೀಡುತ್ತಿಲ್ಲ ಎಂಬುದಾಗಿ ರಾಹುಲ್ ಹೇಳುತ್ತಿದ್ದಾರೆ. ಆದರೆ ಇಂತಹ ಮಾತುಗಳ ಬಗ್ಗೆ ಅವರದೇ ಕಾಂಗ್ರೆಸ್ ಪಕ್ಷದ ನಾಯಕರು ನಗುತ್ತಿದ್ದಾರೆ ಎಂದು ತೋಮರ್ ಬೊಟ್ಟು ಮಾಡಿದರು.
ಕಳೆದ ಕೆಲವು ದಿನಗಳಿಂದ ರಾಹುಲ್ ಅವರು , ರೈತರು ಸರಕಾರದ ಜೊತೆ ಯಾವುದೇ ಒಪ್ಪಂದಕ್ಕೆ ಬರುವುದನ್ನು ತಡೆಯಲು ರೈತರಲ್ಲಿ ಸರಕಾರದ ಬಗ್ಗೆ ಅಪನಂಬಿಕೆಗಳನ್ನು ಹುಟ್ಟಿಸುವ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ತೋಮರ್ ಅವರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss