ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮ್ಯಾಚ್ ಫಿಕ್ಸಿಂಗ್ ಹೇಳಿಕೆಯ ಹಿಂದೆ ಸೋಲುವ ಭೀತಿಯ ದುಃಖ ಹಾಗೂ ಹತಾಶೆಯಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಆತುರಗಳಿಂದಾಗಿ ಕಾಂಗ್ರೆಸ್ ಚುನಾವಣೆಗಳಲ್ಲಿ ಸತತವಾಗಿ ಸೋಲು ಕಾಣುತ್ತಿದೆ, ಅವರು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಚುನಾವಣೆಯಲ್ಲಿ ಮೋಸ ಆಗಿದೆ ಎಂದು ಸುಳ್ಳುಗಳ ಸರಮಾಲೆಗಳನ್ನೇ ಹೆಣೆಯುತ್ತಿದ್ದಾರೆ. ಬಿಹಾರದಲ್ಲಿ ಅವರು ಸೋಲುವುದು ಖಚಿತ. ಅದಕ್ಕಾಗಿ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನಡ್ಡಾ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ