Wednesday, August 17, 2022

Latest Posts

ರಿಚಿಗಾಗಿ ಗೋವಾ ಹೊರಟ ರಕ್ಷಿತ್ ಶೆಟ್ಟಿ, ಯಾಕೆ ಗೊತ್ತಾ?

ಸಿಂಪಲ್  ಸ್ಟಾರ್  ರಕ್ಷಿತ್  ಶೆಟ್ಟಿ  ಸದ್ಯ  ಸಾಲು  ಸಾಲು  ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾಾರೆ.  ಈಗಾಗಲೇ  ನಾಲ್ಕು  ಸಿನಿಮಾಗಳನ್ನ  ಒಟ್ಟಾಗಿ ಪ್ಲಾನ್ ಮಾಡಿಕೊಂಡಿರುವ  ರಕ್ಷಿತ್ ಇದೀಗ  ರಿಚಿಗಾಗಿ  ಗೋವಾ  ಸೇರಿಕೊಂಡಿದ್ದಾರೆ.

.ಅಂದ್ಹಾಗೆ ’ರಿಚಿ’ ರಕ್ಷಿತ್ ಅಭಿನಯದ ಮುಂದಿನ ಸಿನಿಮಾ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಪ್ರಾರಂಭಿಸಿರುವ ಸಿಂಪಲ್ ಸ್ಟಾರ್ ಗೋವಾ ಬ್ಯಾಕ್ ಡ್ರಾಪ್ ನ ಕಥೆಗಾಗಿ ಗೋವಾಗೆ ಹೊರಟಿದ್ದಾರೆ. ಗೋವಾದಲ್ಲಿ ಕುಳಿತು ಕಥೆ ಬರೆಯುತ್ತಿರುವ ರಕ್ಷಿತ್ ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ

ರಿಚಿ ಅಂದಾಕ್ಷಣ ’ಉಳಿದವರು ಕಂಡಂತೆ’ ಸಿನಿಮಾ ನೆನಪಾಗುತ್ತೆ. ರಿಚಿ ಪಾತ್ರದ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದಿದ್ದ ರಕ್ಷಿತ್ ಈಗ ಮತ್ತೆ ಆ ಪಾತ್ರಕ್ಕೆ ಜೀವ ತುಂಬಲು ಹೊರಟಿದ್ದಾರೆ. ’ರಿಚಿ’ ಯಾವ ರೀತಿಯ ಸಿನಿಮಾ ಎನ್ನುವುದನ್ನು ರಕ್ಷಿತ್ ಎಲ್ಲಿಯೂ ಬಹಿರಂಗಪಡಿಸಿಲ್ಲ. ’ಉಳಿದವರು ಕಂಡಂತೆ’ ಸಿನಿಮಾದ ಮುಂದುವರೆದ ಭಾಗನಾ? ಎನ್ನುವ ಕುತೂಹಲ ಅನೇಕರಲ್ಲಿ ಮೂಡಿದೆ.

ಇನ್ನು  ರಿಚಿ ಸಿನಿಮಾ ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಮಂಗಳೂರು, ಉಡುಪಿಯಲ್ಲಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣ ವಾಗಲಿದೆಯಂತೆ. ಆದರೆ ಚಿತ್ರದ ಕೆಲವು ದೃಶ್ಯಗಳನ್ನು ಗೋವಾದಲ್ಲಿಯೂ ಸೆರೆಹಿಡಿಯಬೇಕಂತೆ. ಮಂಗಳೂರು, ಉಡುಪಿ ಚಿರಪರಿಚಿತ ಆದರೆ ಗೋವಾದ ಬಗ್ಗೆ ಹೆಚ್ಚು ಗೊತ್ತಿಲ್ಲದ ಕಾರಣ ಅಲ್ಲಿಗೆ ಹೋಗಿ, ಸ್ಥಳವನ್ನು ನೋಡಿ, ಕಥೆ ಬರೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!