ನವದೆಹಲಿ: ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಖ್ಯಸ್ಥ ಮುಖೇಶ್ ಅಂಬಾನಿಯ ಸಂಪತ್ತು ಅಧಿಕವಾಗಿದೆ
ಮುಖೇಶ್ ಅಂಬಾನಿಯ ಸಂಪತ್ತು ಬರೋಬ್ಬರಿ 17 ಶತಕೋಟಿ ಡಾಲರ್ ಹೆಚ್ಚಳವಾಗಿದ್ದು, ಭಾರತೀಯ ರೂಪಾಯಿ ಮೌಲ್ಯದಲ್ಲಿ 1ಲಕ್ಷ ಕೋಟಿ ರೂಪಾಯಿಗೂ ಅಧಿಕ. ಬ್ಲೂಮ್ಬರ್ಗ್ನ ಬಿಲಿಯನೇರ್ಗಳ ಪ್ರಕಾರ ಡಿ.23ರೊಳಗೆ ಮುಖೇಶ್ ಅಂಬಾನಿಯ ಸಂಪತ್ತು 61 ಶತಕೋಟಿ ಡಾಲರ್ ಆಗಿದೆ.
ಒಂದೆಡೆ ಭಾರತದ ಮುಖೇಶ್ ಅಂಬಾನಿ ಮತ್ತು ಚೀನಾದ ಉದ್ಯಮಿ ಜಾಕ್ ಮಾ ಅವರ ಸಂಪತ್ತು ಶೇ.11.3 ದಶಲಕ್ಷ ಅಧಿಕವಾಗಿದೆ.
2019ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಷೇರುಗಳ ಮೌಲ್ಯ ಶೇ.40 ಏರಿದ್ದು. ಮುಖೇಶ್ ಅಂಬಾನಿ ಅವರ ಉದ್ಯಮದ ಬೆಳವಣಿಗೆಗೆ ಹೂಡಿಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ತೈಲೋದ್ಯಮ ಸಂಸ್ಥೆಯಾಗಿದ್ದ ರಿಲಯನ್ಸ್ ಈಗ ರೀಟೇಲ್, ಟೆಲಿಕಮ್ಯುನಿಕೇಷನ್ ಕ್ಷೇತ್ರಗಳತ್ತ ಗಮನಹರಿಸುತ್ತಿರುವುದು, ಷೇರುಗಳ ಮೌಲ್ಯಾಭಿವೃದ್ಧಿಗೆ ಕಾರಣ ಎನ್ನಲಾಗುತ್ತಿದೆ.
ಜಿಯೋ ಸಂಸ್ಥೆಯು ಟೆಲಿಕಮ್ಯುನಿಕೇಷನ್ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದಿರುವುದಕ್ಕೆ, ಮಾರುಕಟ್ಟೆಯಲ್ಲಿ ನಂಬಿಕೆಗಳಿಸಲು ಕಾರಣವಾಗಿದೆ, ಮತ್ತು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಹೂಡಿಕೆದಾರರ ಮೌಲ್ಯವನ್ನು ವೃದ್ಧಿಸಲಾಗುತ್ತದೆ ಎಂದು ಟಿಸಿಜಿಯ ಮುಖ್ಯ ಹೂಡಿಕೆ ಅಧಿಕಾರಿ ಚಕ್ರಿ ಲೋಕಪ್ರಿಯ ಹೇಳಿದ್ದಾರೆ.