ಸಂಬಂಧದಲ್ಲಿದ್ದರೂ ಕೆಲವೊಮ್ಮೆ ಖಾಲಿ ಎನಿಸುತ್ತದೆ. ಸಿಂಗಲ್ ಇರುವಾಗ ಒಬ್ಬಂಟಿ ಎನಿಸಿದರೆ ಬಾಯ್ಫ್ರೆಂಡ್ ಮಾಡಿಕೋ, ಮದುವೆ ಆಗು ಅನ್ನುತ್ತಾರೆ. ಆದರೆ ಒಂದು ಸಂಬಂಧಕ್ಕೆ ಎಂಟ್ರಿ ಕೊಟ್ಟ ನಂತರವೂ ಒಬ್ಬಂಟಿ ಎನಿಸಿದೆಯಾ? ನನ್ನ ಜೊತೆ ಇದ್ದರೂ ಖಾಲಿ ಎನಿಸಿದೆಯಾ? ಇಂಥ ಸಂದರ್ಭ ಎಲ್ಲರ ಜೀವನದಲ್ಲೂ ಬಂದು ಹೋಗುತ್ತದೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು..
- ನಿಮ್ಮನ್ನು ಪೂರ್ಣಗೊಳಿಸಲು ಅವರು ಬೇಕಿಲ್ಲ. ನೀವು ಅವರಿಲ್ಲದೆ ಅಪೂರ್ಣ ಎಂಬ ಭಾವನೆ ಬೇಡ. ನೀವು ನಿಮ್ಮನ್ನು ಪ್ರೀತಿಸಿ. ಫೇಸ್ ಮಾಡಿ.
- ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಿ. ನಿಮ್ಮ ಸಂಬಂಧದಲ್ಲಿಯೂ ರಿಸ್ಕ್ ತೆಗೆದುಕೊಳ್ಳಿ. ನೀವು ಮಾಡಬೇಕಿದ್ದ ಬ್ಯುಸಿನೆಸ್ ಅಥವಾ ನಿಮ್ಮ ಹಾಬಿ ಬಗ್ಗೆ ಯೋಚಿಸಿ.
- ತಪ್ಪೆಲ್ಲಿ ಆಗುತ್ತಿದೆ ಯೋಚಿಸಿ. ನೀವು ಏನು ಮಾಡುತ್ತಿದ್ದೀರಿ, ಅವರೇನು ಮಾಡುತ್ತಿದ್ದಾರೆ. ತಪ್ಪು ಎಲ್ಲಿ ಆಗುತ್ತಿದೆ? ಇವನ್ನು ಕುಳಿತು ಯೋಚಿಸಿ.
- ಎಲ್ಲ ನನಗೆ ಅರ್ಥವಾಗಿದೆ. ನಾನು ಕಾಂಪ್ರಮೈಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನಿಮ್ಮ ಮೇಲೆ ನೀವು ಕರುಣೆ ತೋರಿಸಬೇಡಿ. ನಿಮ್ಮನ್ನು ನೀವೇ ಪಾಪ ಎಂದುಕೊಂಡರೆ ಜೀವನ ಮುಂದೆ ಹೋಗುವುದಿಲ್ಲ.
- ಮಾತನಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ.ಎಲ್ಲವೂ ಅರ್ಥವಾದಂತೆ ಸುಮ್ಮನಾಗಬೇಡಿ. ಮಾತನಾಡಿ. ನಿಮ್ಮ ಸಮಸ್ಯೆ ಏನು ಹೇಳಿ. ಅವರ ಸಮಸ್ಯೆ ಏನು ಕೇಳಿ. ಮಾತನಾಡಿದರೆ ಸಮಸ್ಯೆ ಖಂಡಿತ ಬಗೆಹರಿಯುತ್ತದೆ.
- ಕೇಳಿಸಿಕೊಳ್ಳಿ. ಕೇವಲ ಮಾತನಾಡುವುದು ಅಷ್ಟೆ ಅಲ್ಲ, ಅವರ ಮಾತನ್ನು ಕೇಳಿಸಿಕೊಳ್ಳಿ. ನಿಮಗೆ ಅರ್ಥವಾಗಬಹುದು. ಮತ್ತೆ ಹೊಸ ಜೀವನ ಆರಂಭ ಮಾಡಬಹುದು.