Wednesday, June 29, 2022

Latest Posts

ರಿಷಬ್ ಶೆಟ್ಟಿ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್, ಆ ಸಿನಿಮಾ ಯಾವುದು ಗೊತ್ತಾ?

ಕೊರೋನಾದ ನಡುವೆಯೇ ನಟ, ನಿರ್ದೇಶಕ ರಿಷಬ್  ಶೆಟ್ಟಿ  ಸದ್ದಿಲ್ಲದೇ  ಒಂದು  ಸಿನಿಮಾ  ಮಾಡಿ ಮುಗಿಸಿದ್ದಾರೆ.

ಇದೀಗ, ಆ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ನಟಿಸಿರುವ ಹೊಸ ಚಿತ್ರದ ಹೆಸರು ಹೀರೋ ಈ ಚಿತ್ರದಲ್ಲಿ ರಿಷಬ್  ಶೆಟ್ಟಿ ನಟನೆ ಮಾತ್ರ. ನಿರ್ದೇಶನದ ಜವಾಬ್ದಾರಿ ನವ ಪ್ರತಿಭೆ ‘ಭರತ್ ರಾಜ್ ಅವರದ್ದು. ಇದು ಇವರ ಮೊದಲ ಸಿನಿಮಾ. ಇನ್ನು ಚಿತ್ರವನ್ನು ನಿರ್ಮಾಣ ಮಾಡಿರುವುದು ರಿಷಬ್ ಶೆಟ್ಟಿ ಫಿಲಂಸ್.

ರಿಷಬ್ ಶೆಟ್ಟಿ ಜೊತೆ ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಮುಖ್ಯ ತಾರಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದ್ದು, ಅರವಿಂದ್ ಎಸ್ ಕಷ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರತೀಕ್ ಶೆಟ್ಟಿ ಅವರ ಸಂಕಲನ ಇದೆ.

ಸದ್ಯಕ್ಕೆ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಬಿಡುಗಡೆ ಬಗ್ಗೆ ಮಾಹಿತಿ ಇಲ್ಲ. ಆದರೆ, ಲಾಕ್ಡೌನ್ ಅವಧಿಯಲ್ಲಿ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳದೆ ಸಿನಿಮಾವೊಂದು ಮಾಡಿ ಮುಗಿಸಿರುವುದು ನಿಜಕ್ಕೂ ಮೆಚ್ಚುಗೆಯ ವಿಚಾರ. ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಹರಿಕಥೆ ಅಲ್ಲ ಗಿಣಿ ಕಥೆ, ಬೆಲ್ ಬಾಟಂ ೨ ಹಾಗೂ ಇನ್ನು ಹೆಸರಿಡದ ಎರಡು ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಚಿತ್ರ  ಕೂಡ  ಮಾಡುತ್ತಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss