Monday, August 8, 2022

Latest Posts

ರುಚಿಕರ ಬಿಸಿ ಬಿಸಿ ಜಿಲೇಬಿ ಸ್ವಾದ ಮನೆಯಲ್ಲೇ ಆನಂದಿಸಿ.. ಜಿಲೇಬಿ ಮಾಡುವ ಸಿಂಪಲ್ ವಿಧಾನ ಇಲ್ಲಿದೆ

ಜಿಲೇಬಿ ಇಷ್ಟಪಡದವರು ಯಾರೂ ಇಲ್ಲ, ಕೆಲವರ ಮನೆಯಲ್ಲಿ ತಿಂಡಿಗೆ ಜಿಲೇಬಿ, ಸಮೋಸ, ಕಚೋರಿ ತಿನ್ನುತ್ತಾರೆ. ಇನ್ನು ಹೊರಗಿನಿಂದ ಜಿಲೇಬಿ ತಂದರೆ ಅದನ್ನು ಯಾವ ಎಣ್ಣೆಯಲ್ಲಿ ಕರಿದಿದ್ದಾರೋ, ಎಂಥ ಕ್ವಾಲಿಟಿಯ ಸಕ್ಕರೆ ಹಾಕಿದ್ದಾರೋ ಎನ್ನುವ ಚಿಂತೆ ಆಗುತ್ತದೆ. ಅದೇ ಮನೆಯಲ್ಲಿ ಮಾಡಿದರೆ ರುಚಿ ಶುಚಿ ಎಲ್ಲವೂ ಸಿಗುತ್ತದೆ. ಹೇಗೆ ಮಾಡುವುದು ಈ ಜಿಲೇಬಿ ನೋಡಿ..
ಬೇಕಾಗುವ ಸಾಮಾಗ್ರಿಗಳು

  • ಮೈದಾ ಒಂದು ಕಪ್
  • ಎರಡು ಸ್ಪೂನ್ ಕಾರ್ನ್ ಫ್ಲೋರ್
  • ಮುಕ್ಕಾಲು ಸ್ಪೂನ್ ಅರಿಶಿಣ
  • ಅರ್ಧ ಕಪ್ ಮೊಸರು
  • ಅರ್ಧ ಕಪ್ ನೀರು
  • ಅರ್ಧ ಕಪ್ ಬೇಕಿಂಗ್ ಸೋಡಾ
  • ಒಂದು ಸ್ಪೂನ್ ನಿಂಬು
  • ಎಣ್ಣೆ ಅಥವಾ ತುಪ್ಪ
  • ಶುಗರ್ ಸಿರಪ್ ಸಾಮಾಗ್ರಿ
  • ಒಂದು ಕಪ್ ಸಕ್ಕರೆ
  • ಅರ್ಧ ಕಪ್ ನೀರು
  • ಒಂದು ಚಿಟಿಕೆ ಕೇಸರಿ
  • ಏಲಕ್ಕಿ ಪುಡಿ
  • ನಿಂಬೆರಸ
    ಮಾಡುವ ವಿಧಾನ
  • ಒಂದು ಪಾತ್ರೆಗೆ ನೀರು ಹಾಗೂ ಸಕ್ಕರೆ ಹಾಕಿ ಇಟ್ಟುಕೊಳ್ಳಿ
  • ಅಂಟು ಅಂಟಾದ ಬಳಿಕ ಸ್ವಲ್ಪ ಸಿರಪ್ ಬೇರೆ ಕಡೆ ತೆಗೆದಿಟ್ಟುಕೊಳ್ಳಿ
  • ಈಗ ಉಳಿದ ಪಾಕಕ್ಕೆ ನಿಂಬೆರಸ,ಏಲಕ್ಕಿ ಪುಡಿ,ಕೇಸರಿ ಹಾಕಿ
  • ಮೈದಾ ಹಿಟ್ಟಿಗೆ ಕಾರ್ನ್‌ಫ್ಲೋರ್, ಅರಿಶಿಣ ಹಾಕಿ ಮಿಕ್ಸ್ ಮಾಡಿ.
  • ನಂತರ ಮೊಸರು, ನೀರು ಹಾಕಿ ಮಿಕ್ಸ್ ಮಾಡಿ
  • ಈ ಮಿಶ್ರಣಕ್ಕೆ ನಿಂಬೆರಸ,ತುಪ್ಪ ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ಸೋಡಾ ಬೆರೆಸಿ.
  • ಈ ಮಿಶ್ರಣವನ್ನು ಜಿಲೇಬಿ ರೀತಿಯಲ್ಲಿ ಎಣ್ಣೆಯಲ್ಲಿ ಕರಿಯಿರಿ.
  • ಎಣ್ಣೆಯಲ್ಲಿ ಕರಿದ ಜಿಲೇಬಿಯನ್ನು ಮೊದಲೆ ತಯಾರು ಮಾಡಿದ್ದ ಪಾಕಕ್ಕೆ ಹಾಕಿ.
  • ಎತ್ತಿಟ್ಟುಕೊಂಡ ಪಾಕವನ್ನು ಈ ಪಾಕದಿಂದ ಹೊರತೆಗೆದ ಜಿಲೇಬಿ ಮೇಲೆ ಹಾಕಿ ಬಿಸಿ ಬಿಸಿ ಸವಿಯಿರಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss