ಮಂಗಳೂರು: ಕೊರೋನಾ ಸರಣಿ ಸೋಂಕಿನಿಂದ ಕಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆ ಆರೆಂಜ್ ಝೋನ್ ನಿಂದ ರೆಡ್ ಝೋನ್ ಗೆ ಹೊರಳುವ ಎಲ್ಲಾ ಲಕ್ಷಣ ಕಾಣುತ್ತಿದೆ.
ಕಳೆದ ಒಂದು ವಾರದ ಅಂತರದಲ್ಲಿ ಒಟ್ಟು 8 ಪ್ರಕರಣಗಳು ಕಂಡುಬಂದಿದ್ದು ಜಿಲ್ಲೆಯ ಜನತೆಯನ್ನು ದಿಗ್ಭ್ರಮೆಗೊಳಿಸಿದೆ. ಎರಡು ದಿನಗಳ ಹಿಂದೆಯಷ್ಟೇ 3ಪ್ರಕರಣ ಕಂಬಂದಿದ್ದು, ಇಂದು ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಎರಡಂಕಿ ಮೂರಂಕಿಯಲ್ಲಿ ಸೋಂಕು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಸೋಂಕಿನ ಮೂಲ ಪತ್ತೆ ಕಾರ್ಯ ಇನ್ನೂ ಆಗದಿರುವುದು ಮತ್ತೊಂದು ಆತಂಕದ ವಿಚಾರ.
ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಲಶೇಖರ ನಿವಾಸಿ 80 ವರ್ಷದ ವೃದ್ಧೆಯ ಸಂಪರ್ಕದಲ್ಲಿದ್ದ ಮಂಗಳವಾರ ಕೊರೋನಾ ಸೋಂಕು ದೃಢಪಟ್ಟಿದೆ.
ಕಾರ್ಕಳ ನಿವಾಸಿಗಳಾದ 50 ವರ್ಷದ ಮಹಿಳೆ ಹಾಗೂ 26ವರ್ಷದ ಯುವಕನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ 33ಕ್ಕೆ ಏರಿಕೆಯಾದಂತಾಗಿದೆ.