ವಾಷಿಂಗ್ಟನ್: ಅಂತೂ ಕೊರೋನಾ ಸೋಂಕು ನಿವಾರಣೆಗೆ ಅಮೆರಿಕ ಸದ್ಯ ಔಷಧಿ ಕಂಡು ಹಿಡಿದಿದೆ. ರೆಮ್ಡಿಸಿವಿರ್ ಬಳಕೆಗೆ ಟ್ರಂಪ್ ಆಡಳಿತ ಒಪ್ಪಿಗೆ ನೀಡಿದೆ.
ದೇಶದಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದ್ದು, ಈಗಾಗಲೇ ಕೆಲ ಸೋಂಕಿತರಿಗೆ ರೆಮ್ಡಿಸಿವಿರ್ ಚುಚ್ಚುಮದ್ದು ಬಳಸಲಾಗಿದೆ. ಇದು ಸೋಂಕು ನಿವಾರಣೆಯ ಸಾಮರ್ಥ್ಯ ಹೊಂದಿರುವುದನ್ನು ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಹೆಲ್ತ್ ಖಾತರಿಪಡಿಸಿದೆ.
ಕನಿಷ್ಠ ಒಂದು ಸಾವಿರ ಮಂದಿಗೆ ಈ ಔಷಧಿ ನೀಡಲಾಗಿದ್ದು, ಸೋಂಕು ತಡೆಗಟ್ಟುವಲ್ಲಿ ಇದು ಪರಿಣಾಮಕಾರಿಯಾಗಿದೆ ಎಂದು ಅಮೆರಿಕನ್ ವೈದ್ಯರು ತಿಳಿಸಿದ್ದಾರೆ. ಈ ಔಷಧಿ ಬಳಕೆ ಬಗ್ಗೆ ಡೊನಾಲ್ಡ್ ಟ್ರಂಪ್ ಕೂಡಾ ಸಕಾರಾತ್ಮಕವಾಗಿ ಹೇಳಿದ್ದು, ಸದ್ಯ ಇದೊಂದು ಪರಿಹಾರವಾಗಿರುವುದು ಸಂತಸಕರ ಎಂದಿದ್ದಾರೆ.