ಹೊಸದಿಗಂತ ವರದಿ ಕುಂದಾಪುರ:
ರೇಣುಕಾಚಾರ್ಯ ಅವರು ಸಹಜವಾಗಿಯೇ ತಮ್ಮ ನೋವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ಹೇಳಿದರು.ಮಂಗಳವಾರ ಕುಂಭಾಶಿ ಆನೆಗುಡ್ಡೆ ದೇವಾಲಯಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಎಲ್ಲರ ವೈಯಕ್ತಿಕ ವಿಚಾರಗಳು ಭಿನ್ನವಾಗಿರುತ್ತದೆ. ಮನುಷ್ಯ ಅಂದ ಮೇಲೆ ನೋವು ಸಹಜ. ಒಂದು ಚೌಕಟ್ಟಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸಿ ಕೊಳ್ಳಲು ಅವಕಾಶ ಇದೆ. ಒಂದೆರಡು ದಿನ ನೋವನ್ನು ಹೊರ ಹಾಕುತ್ತಾರೆ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ನುಡಿದರು. ಶಾಸಕ ಸುಕುಮಾರ್ ಶೆಟ್ಟಿ ಸೇರಿದಂತೆ ಭಾಜಪ ಮುಖಂಡರು ಉಪಸ್ಥಿತರಿದ್ದರು.