Wednesday, June 29, 2022

Latest Posts

ರೈತನೋರ್ವ ನೇಣಿಗೆ ಶರಣು

ಹೊಸ ದಿಗಂತ ವರದಿ, ಧಾರವಾಡ:

ಮಾಡಿದ ಸಾಲ ತೀರಿಸಾಗದೆ, ಮುಂಗಾರು ಬೆಳೆ ಕೈಕೊಟ್ಟ ಹಿನ್ನಲೆ ಬೇಸರಿಸಿಕೊಂಡ ರೈತನೊಬ್ಬ ಮನೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ನಡೆದಿದೆ.
ಉಪ್ಪಿನಬೆಟಗೇರಿ ಗ್ರಾಮದ ವಿರಕ್ತಮಠ ಓಣಿಯ ಜಗದೀಶ ಈರಯ್ಯ ಇಂಚಗೇರಿಮಠ ನೇಣಿಗೆ ಶರಣಾದ ರೈತ. ನಾಲ್ಕು ಎಕರೆ ಜಮೀನಿನಲ್ಲಿ ಹುಲುಸಾಗಿ ಬೆಳೆದಿದ್ದ ಬೆಳೆ, ಮಳೆಯ ಆವಾಂತರದಿoದ ಕೈಕೊಟ್ಟಿತ್ತು ಎಂದು ನೊಂದಿದ್ದ.
ಹಿಂಗಾರು ಬೆಳೆಯಾದರೂ, ಕೈ ಹಿಡಿಯಬಹುದೆಂದು ನಿರೀಕ್ಷೆಯಲ್ಲಿದ್ದ ರೈತ ಜಗದೀಶಗೆ ನಿರಾಸೆ ಕಾರ್ಮೋಡ ಕವಿದಿದೆ. ಮನೆ ಕಟ್ಟಲು ರೂ.5ಲಕ್ಷ ಸಾಲ ಮಾಡಿದ್ದನ್ನು. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣ ಗರಗ ಠಾಣೆಯಲ್ಲಿ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss