ಹೊಸ ದಿಗಂತ ವರದಿ, ತುಮಕೂರು:
ಸರ್ಕಾರದ ಯೋಜನೆಗಳ ರೈತರಿಗೆ ತಲುಪಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೇಸರ ವ್ಯಕ್ತಪಡಿಸಿದರು.
ಪಾವಗಡದ ಕಣಿವೆ ನರಸಿಂಹಸ್ವಾಮಿ ದೇವಾಲಯದ ಬಳಿ ಸಾಲುಮರದತಿಮ್ಮಕ್ಕ ಸಸ್ಯೋಧ್ಯಾನವನ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಹೊಣಗೇಡಿತನದಿಂದ ಅರಣ್ಯ ಇಲಾಖೆಯ ಯೋಜನೆಗಳು ರೈತರನ್ನು ತಲುಪುತ್ತಲೇ ಇಲ್ಲ ಎಂದರು. ರಾಜ್ಯದಲ್ಲಿ ಅರಣ್ಯ ಬೆಳೆಸುವಲ್ಲಿ.ಸಂರಕ್ಷಿಸುವಲ್ಲಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ಯಾವ ಪ್ರದೇಶಲ್ಲಿ ಯಾವಗಿಡನೆಡಬೇಕು ಎಂಬ ಬಗ್ಗೆ ರೈತರಿಗೆ ಸಲಹೆ ಮಾರ್ಗದರ್ಶನ ನೀಡುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.