ಹೊಸ ದಿಗಂತ ವರದಿ, ತುಮಕೂರು:
ಜಂಟಿಪವತಿ ಖಾತೆ ಮಾಡಿಕೊಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮಪಂಚಾಯಿತಿಯ ಕಾರ್ಯದರ್ಶಿ ಲೋಕೇಶ್ವರ ಇಂದು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇಪ್ಪಾಡಿ ಸತೀಶ್ ಎಂಬುವವರು ತಮ್ಮ ತಂದೆ ನಿಧನರಾದರು ಹಿನ್ನೆಲೆಯಲ್ಲಿ ಅವರ ಹೆಸರಿನ ಜಮೀನಿನ ಪವತಿಖಾತೆ ಖಾತೆಯನ್ನು ತಮ್ಮ ಅಜ್ಜಿ ಮತ್ತು ದೊಡ್ಡಪ್ಪನ ಹೆಸರಿಗೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.ಆದರೆ ಗ್ರಾಮಪಂಚಾಯಿತಿಗ ಕಾರ್ಯದರ್ಶಿ 20ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಮೊದಲೇ 10ಸಾವಿರ ಪಡೆದಿದ್ದು ಉಳಿದ ಹತ್ತು ಸಾವಿರ ನಡೆಯುವಾಗ ಜನವರಿ 7ರಂದು ಎಸಿಬಿ ಡಿಎಸ್ ಪಿ.ಮಲ್ಲಿಕಾರ್ಜುನ ಚುಕ್ಕಿ ಮತ್ತು ಇನ್ಸ್ಪೆಕ್ಟರ್ ವಿಜಯಲಕ್ಷ್ಣೀ ಅವರ ಬಲೆಗೆ ಬಿದ್ದಿದ್ದಾರೆ.