ತುಮಕೂರು: ರಾಜ್ಯದ ರೈತರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಮ್ಮ ಪಕ್ಷ ಸಹಿಸುವುದಿಲ್ಲ ಈ ರೈತವಿರೋಧಿ ಮತ್ತು ಕಾರ್ಮಿಕರ ವಿರೋಧಿ ಕಾಯ್ದೆಗಳ ವಿರುದ್ಧ ರಾಜ್ಯ ವಿಧಾಮಂಡಲ ಮತ್ತು ಸಂಸತ್ತಿನಲ್ಲಿ ಮತ್ತು ಹೊರಗಡೆ ಹೋರಾಟ ನಡೆಸುವುದಾಗಿ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ಅವರು ಇಂದು ಜಿಲ್ಲೆಯ ಜೆಡಿಎಸ್ ಹಮ್ಮಿಕೊಂಡಿದ್ದ ಭೂಸುಧಾರಣಾ, ಎಪಿಎಂಸಿ ಮತ್ತು ಕಾರ್ಮಿಕರ ಕಾಯ್ದೆಗಳ ತಿದ್ದುಡಿ ವಿರೋಧಿ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತೀದ್ದರು.
ಕೊರೊನ ನಿಯಮಾವಳಿಗಳನ್ನು ಪಾಲಿಸಿಕೊಂಡೆ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಈ ರೀತಿಯ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಕಾರ್ಮಿಕರಿಗೆ ನಿರಂತರ ತೊಂದರೆ ಕೊಡಲಾಗುತ್ತಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ದೇಶಿಸಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇವೇಗೌಡರೀಗೆ ವಯಸ್ಸಾಗಿದ್ದರೂ ಅವರ ಹೋರಾಟಕ್ಕೆ ವಯಸ್ಸಾಗಿಲ್ವ ಎಂದರು. ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್. ಶಾಸಕ ರಾಧಬೇಮೆಲ್ ಕಾಂತರಾಜು,ವೀರಭದ್ರಯ್ಯ,ತಿಪ್ಪೇಸ್ವಾಮೀ, ಜೆಡಿಎಸ್ ಜಿಲ್ಲೆಯ ಅಧ್ಯಕ್ಷರಾದ ಆರ್. ಸಿ.ಆ.ಅಂಜನಪ್ಪ,ಮಾಜಿ ಶಾಸಕ ಹೆಚ್. ನಿಂಗಪ್ಪ ಜಿಲ್ಲಾ ಕಾರ್ಯಾಧ್ಯಕ್ಷ ನಾಗರಾಜು ಹಾಜರಿದ್ದರು.