ಧಾರವಾಡ:ರೈತ ಸೇನಾ ಕರ್ನಾಟಕ ಮತ್ತು ಹೆಸರು ಸೇನೆ ನೇತೃತ್ವದಲ್ಲಿ ವಾರಗಳ ಕಾಲ ನಡೆದ ಅಹೋರಾತ್ರಿ ನಿರಂತರ ಧರಣಿಗೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಧಾರವಾಡದಲ್ಲಿ ಮುಂದುವರೆಕೆಗೆ ಆದೇಶ ಮಾಡಿದೆ.
ಕರ್ನಾಟಕ ನೀರಾವರಿ ನಿಗಮ ಕಚೇರಿ ಕೆಲವು ಹಿರಿಯ ಅಧಿಕಾರಿಗಳು ನಿಗಮದ ಹಣ ದುರ್ಬಳಿಸಿಕೊಂಡಿದ್ದಲ್ಲದೇ, ತಮ್ಮ ಸ್ವಾರ್ಥಕ್ಕೆ ಕಚೇರಿ ಬೆಂಗಳೂರು ಅಥವಾ ಬೆಳಗಾವಿ ಜಿಲ್ಲೆಗೆ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದು ತಿಳಿದು ರೈತ ಸೇನಾ ಹೋರಾಟ ಆರಂಭಿಸಿತ್ತು.
ಹೋರಾಟಗಾರ ವೀರೇಶ ಸೊಬರದಮಠ ನೇತೃತ್ವದಲ್ಲಿ ನಡೆದ ನಿರಂತರ ಧರಣಿಗೆ ಹೈಕೋರ್ಟ್ ಪೀಠದ ಹೋರಾಟಗಾರ ಮತ್ತು ಹಿರಿಯ ವಕೀಲ ಬಿ.ಡಿ.ಹಿರೇಮಠ, ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘ-ಸoಸ್ಥೆಗಳು ಬೆಂಬಲ ಸೂಚಿಸಿದ್ದವು.
ಆದರೆ, ಆದಾಗ್ಯೂ ಸ್ಪಂದಿಸಿದ ಹಿನ್ನಲೆ ಕೊನೆಗೆ ಕಚೇರಿ ಸ್ಥಳಾಂತರ ಮಾಡದಂತೆ ನ್ಯಾಯಾಲಯದ ಮೊರೆ ಕೂಡ ಹೋದರು. ಅಲ್ಲದೇ, ಕಚೇರಿ ಬೆಳಗಾವಿಗೆ ಸ್ಥಳಾಂತರಿಸಿದoತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಗೂ ರೈತ ಸೇನಾ ಮನವಿ ಮಾಡಿದೆ.
ರೈತರ ಹೋರಾಟ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಮನವಿಗೆ ಸ್ಪಂದಿಸಿ ಕರ್ನಾಟಕ ನೀರಾವರಿ ನಿಗಮದ ಕಚೇರಿ ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಬದಲಿಗೆ ಧಾರವಾಡದಲ್ಲೇ ಮುಂದವರಿಕೆಗೆ ಮರು ಆದೇಶ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈತ ಹೋರಾಟಕ್ಕೆ ಮಣಿದು ಸರ್ಕಾರ ಕರ್ನಾಟಕ ನೀರಾವರಿ ನಿಗಮದ ಕಚೇರಿ ಧಾರವಾಡದಲ್ಲಿ ಮುಂದುವರಿಸಲು ಆದೇಶವು ಸ್ವ್ವಾಗತಾರ್ಹ. ಇದು ರೈತ ಸೇನಾ ಹೋರಾಟಕ್ಕೆ ಸಂದ ಜಯ. ಕಚೇರಿ ಉಳಿಸಿದ ಸರ್ಕಾರಕ್ಕೆ, ರೈತ ಸೇನಾ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಂಘಟನೆಗಳಿಗೆ, ಮಾಧ್ಯಮಗಳಿಗೆ ಕೃತಜ್ಞೆಗಳು. ಅಧಿಕಾರ ವಿಕೇಂದ್ರಕರಣದ ಹಿನ್ನಲೆ 9 ಕಚೇರಿ ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಹೋರಾಟ ಕೈಗೆತ್ತಿಕೊಳ್ಳಲಿದೆ.
–ವೀರೇಶ ಸೊಬರದಮಠ, ರೈತ ಹೋರಾಟಗಾರ